ನಮಸ್ಕಾರ. ಸ್ವಾಗತ - ಸುಸ್ವಾಗತ ನನ್ನ ಮೂರನೆ ಬರಹಕ್ಕೆ. SORRY ಸ್ವಲ್ಪ ಲೇಟ್ ಆಯ್ತು ಇದನ್ನ ಬರೆಯಲು. ನೋಡಿ, ದೊಡ್ ದೊಡ್ ಸಾಹಿತಿಗಳಾದ್ರೆ RAW MATERIALಗಾಗಿ ಹುಡುಕ್ಕೊಂಡು ಹೋಗ್ತಾರೆ. ಅವರ ಬರವಣಿಗೆಯ ಕಚ್ಚಾ ವಸ್ತುಗಾಗಿ ಊರೂರ್ ಅಲ್ದಾಡ್ತಾರೆ. ಸ್ವಾನುಭವ ಪಡ್ಕೊಂಡ್ ಬರೀತಾರೆ. ಆದ್ರೆ ನಂಗೆ ಆ RAW MATERIAL ಲೇ ಕಷ್ಟ. ಸಿಕ್ಕಿದ್ರೂ ಸ್ವಲ್ಪ CONTROVERSIAL. ಇರಲಿ. ವಿಷಯಕ್ಕೆ ಬರೋಣ.
ನಾಯಿ - ಆ ’ದತ್ತಾತ್ರೇಯ’ರ ಅಪರಾವತಾರ ಅಂತ ದೊಡ್ಡವ್ರು ಹೇಳ್ತಾರೆ. ಸುಮಾರು ’ದತ್ತ’ರ PHOTOS ಗಳಲ್ಲಿ, ಆ ರವಿವರ್ಮನ ಸಮಕಾಲೀನ ಚಿತ್ರಕಾರರು "ದತ್ತ"ನೊಡನೆ ನಾಯಿಯನ್ನು ಚಿತ್ರಿಸಿದ್ದಾರೆ. ಆ HISTORY ಕೆದಕೋಕ್ಕೆ ಟೈಮು ಇಲ್ಲ, PERSEVARANCE ಊ ಇಲ ಬಿಡಿ. ಆದ್ರೆ ಅ ವಿಷಯದ ಬಗ್ಗೆ ಒಂದೆರಡು ಪ್ರಶ್ನೆಗಳು ಹಂಗೆ ನನ್ ಮನಸ್ಸೆಂಬ TEMPORARY MEMORY ಲಿ ಹಾದುಹೋಗ್ತಾಯಿದೆ. ಮೊದಲನೆಯದು, ಈ COSTLY ನಾಯಿಗಳಾದ GOLDEN RETRIEVER, LABRADOR, GERMAN SHEPERD ಮುಂತಾದವುಗಳೂ ದತ್ತನ ಅವತಾರನಾ? ಎರಡೆನೆಯದು, ಈ ಬೆಂಗಳೂರಿನ ನಾಯಿಗಳನ್ನು ದತ್ತನ ನಾಯಿಗಳೆಂದರೆ ಆ ದೇವರು ನಮ್ಮನ್ನ ಕ್ಷಮಿಸ್ತಾನ? ಅಂತ. ಮೊದಲನೆಯ ಪ್ರಶ್ನೆ ಇವತ್ತಿಗೆ OUT OF SYLLABUS.
ಇಂದು ನಾನ್ ಹೇಳಬೇಕೆಂದುಕೊಂಡದ್ದು ಬೆಂಗಳೂರಿನ ಕೆಲವು ತೆರನಾದ ಬೀದಿ ನಾಯಿಗಳು ಮತ್ತು ಟೆಕ್ಕಿಗಳ ಸಂಭಂದದ ಬಗ್ಗೆ. ಒಂದ್ ಹಳೇ SMS JOKE ಹೀಗನ್ನತ್ತೆ - ಬೆಂಗಳೂರಿನ ಮಧ್ಯರಾತ್ರಿಯ ಯಾವುದೊಂದು ಮೂಲೆಯಲ್ಲಿ ನಿಂತು ಕಲ್ಲು ಹೊಡೆದರೂ, ಅದು ಬೀಳೋದು ಒಂದು ಬೀದಿ ನಾಯಿಗೆ ಅಥವ ಒಬ್ಬ ಐಟಿ ಉದ್ಯೋಗಿಗಂತೆ !! TATA INDICA ವನ್ನೂ ಈ ಲಿಸ್ಟಿಗೆ ಸೇರಿಸಬಹುದು. ಅದಿರಲಿ. ಈ ನಾಯಿಗಳಿಗೆ , ಟೆಕ್ಕಿಗಳ ಕಂಡರೆ ಒಂದು ನಯಾಪೈಸೆ ಮರ್ಯಾದೆ ಬೇಡ್ವಾ?? ನಾನು ಒಬ್ಬ ಸೋ ಕಾಲ್ಡ್ ಟೆಕ್ಕಿ (ಥೂ!! ಯಾಕೊ ಒಂದು ಚೂರು ಹೆಮ್ಮೆನೇ ಆಗ್ತಾ ಇಲ್ಲ - ಎಂತಹ ದೌರ್ಭಾಗ್ಯ). ನನ್ನ ಡೈಲಿ ಲೈಫ್ ಈ ಬೀದಿ ನಾಯಿಗಳಿಂದ ತುಂಬಾನೆ ಹಾಳಗಿದೆ. ನಾನು ಒಂದು ಸ್ಪೋರ್ಟ್ಸ್ ಸೈಕಲ್ ಕೊಂಡು ಆಫೀಸ್ ಗೆ ಹೋಗೋಣ, ಶೋಕಿ ಮಾಡಣ, ಪರಿಸರ ಸಂರಕ್ಷಣೆ ಚೂರು ಪಾರು ಆಗ್ಲಿ ಅಂತ ಅಂದ್ಕೊಂಡೆ. ನಾನ್ ಓಡಾಡೊ ದಾರಿಯ ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆರಗಾಗಿ ಆ PLAN DROP ಮಾಡ್ಬೇಕಾಯ್ತು. ಅಲ್ಲದೆ, ಬೈಕಿನಲ್ಲೂ ಆ ದಾರಿಲಿ ಹೊಗಲು ಮೀಟರ್ ಇಲ್ದೆ ಎರಡು ಮೂರು ಕಿಲೋಮೀಟರ್ ದೂರ ಆದ್ರು ಬಳಸ್ಕೊಂಡು, ಬೇರೆ ದಾರಿಲಿ ಹೋಗ್ತಿನಿ ನಾನು - ಪೆಟ್ರೋಲ್ ಹಾಕ್ಸೋಕ್ ಸಾಲ ಮಾಡ್ಬೇಕಾದ ಈ ಕಾಲದಲ್ಲೂ. ಈ ವಿಷಯನಾ ನಾನು ಅಣ್ಣಾವ್ರಿಗೆ ಹೇಳಿ ಅವರಿಂದ ಉಪವಾಸ ಮಾಡ್ಸ್ತಿನಿ !! ಒಂದ್ಸಾರಿ ನಮ್ ಟೀಮ್ ಮೇಟ್ ಒಬ್ಬನಿಗೆ ಇದೇ ಬೀದಿ ನಾಯಿ ಕಚ್ಚಿ ಅವನು SICK LEAVE ತಗೊಂಡ. ನಾಯಿ ಕಚ್ಚಿದೆ ಅಂತ ಬರೀ ಡವ್ ಮಾಡ್ತನೆ ಇವ್ನು ಅಂತ ONSITE ಇಂದ ಬೊಬ್ಬೆ ಹೊಡೆದರು. ಪಾಪ ನಿಜ್ವಾಗಿ ನಾಯಿ ಕಚ್ಚಿಸಿಕೊಂಡ ಈತನಿಗು-ಬೊಬ್ಬೆ ಹೊಡೆದವನಿಗು ಸ್ವಲ್ಪ ದಿನದ ವೈಮನಸ್ಯಕ್ಕೆ ಬೀದಿ ನಾಯಿಗಳೇ ಕಾರಣ ಅಂದರೆ ತಪ್ಪಾಗಲಾರದು.
ಒಂದು ಬಾರಿ ಮುಗ್ಧವಾಗಿ ನಿಂತಿದ್ದ ನನ್ನ ಬೈಕನ್ನು ಹುಲಿಯೊಂದು ಬಂದು ಎಳೆದುಕೊಂಡು ಹೋಯಿತು. ನಾನು ನನ್ನ ಬೈಕನ್ನು ಮರು ಪಡೆಯಲು ಹೋಗಬೇಕಾದ ಜಾಗಕ್ಕೆ ಹೋದೆ. ಅಲ್ಲಿಯೂ ನಾನೊಬ್ಬ ಟೆಕ್ಕಿ ಅಂತ ಗೊತ್ತಾಗಿ ಅಲ್ಲಿಯವರು ನನಗೆ ಮರ್ಯಾದೆ ಕೊಡಲಿಲ್ಲ. ಅಲ್ಲಿಯವನೊಬ್ಬ ಅವನೇ ಸರ್ವಾಧಿಕಾರಿಯಂತೆ ಆಡುತಿದ್ದ. ನನ್ನ ಬೈಕನ್ನು ನಾನು ಹಿಂತಿರುಗಿ ಪಡೆಯಲು ಅವನಿಂದ ಅಸಹ್ಯ ಮಾತುಗಳನ್ನು ಕೇಳಬೇಕಾಯಿತು. ಅಷ್ಟರೊಳಗೆ ಹುಲಿ ಬಂತು. ಗಾಡಿ ಇಳಿಸಿತು. ಸರ್ಕಾರಕ್ಕೆ ಹಣ ಕೊಟ್ಟು ಗಾಡಿಯನ್ನು ಬಿಡಿಸಿಕೊಂಡೆ. ಇನ್ನು ಕೆಲವರು ಪೂರ್ತಿ ಹಣವನ್ನು ಕೊಡದೆ (ಆ ಹಣ ಉಳಿಸಿ ಏನ್ ಡಾಲರ್ಸ್ ಕಾಲೊನಿಲಿ ಸೈಟ್ ತಗೊಳಕ್ಕಾಯ್ತದ???) ಚಿಲ್ಲರೆ ಕೊಟ್ಟು ಬಿಡಿಸಿಕೊಂಡರು. ನಾಯಿಗಳಿಗೆ ಅರ್ಧ ರೊಟ್ಟಿ ಸಿಕ್ಕರೂ ಸಾಕಲ್ಲ!!
ಅಂದೇ ನಂಗೆ ತಿಳಿಯಿತು. ಯಾವ್ದೇ ನಾಯಿನೂ ನನ್ನಂಥವರಿಗೆ ಮರ್ಯಾದೆ ಕೊಡೊಲ್ಲ ಅಂತ. ಅದಕ್ಕೆ ನಾನು ತೀರ್ಮಾನ್ ಮಾಡಿರೊದು ಏನಂದ್ರೆ ಇನ್ಮುಂದೆ ಆಫೀಸ್ ಇಂದ ಆಚೆ ಬಂದೊಡನೆ ID CARD ತೆಗೆದು ಜೇಬಲ್ಲಿ ಇಟ್ಕೊಳಣ ಎಂದು !!!!!!!!!!!!!!