ಶಾಲಭಂಜಿಕೆ ಎಂಬ ಮನಃರಂಜಿಕೆ

ನಾನು ಈ ಹಿಂದೆ ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದಿದ್ದರೂ, ಅದರ ಬಗ್ಗೆ ಬರೀಬೇಕು ಅಂತ ಅನ್ನಿಸಿರಲಿಲ್ಲ. Of course, ಭೈರಪ್ಪ, ಅನಂತಮೂರ್ತಿ, ಕಾರಂತ, ತೇಜಸ್ವಿ ಮೊದಲಾದವರ ಸಾಹಿತ್ಯದ ಬಗ್ಗೆ ನಾನೇನ್ ಹೇಳೋದಿರತ್ತೆ.  ಪುಸ್ತಕ ಪ್ರೇಮಿಗಳು ಮುಗಿಬಿದ್ದು ಓದ್ತಾರೆ.

ಆದರೆ ಇಲ್ಲೊಂದು ಪುಸ್ತಕದ ಬಗ್ಗೆ ನಾನು ಹೇಳಲೇಬೇಕು. ಅದು ಛಂದ  ಪುಸ್ತಕ ಪ್ರಕಟಿಸಿರುವ ಶಾಲಭಂಜಿಕೆ ಎಂಬ ಮೈನವಿರೇಳಿಸುವ ಕಥಾ ಸಂಕಲನ. ಇತಿಹಾಸ ಮತ್ತು ವಿಜ್ಞಾನದ ಅಜ್ಞಾತ ಸತ್ಯಗಳ ಅಡಿಗಟ್ಟಿನಲ್ಲಿ ಹೆಣೆಯಲಾದ ಕಥೆಗಳು ರೋಚಕ ಎನಿಸುವ ರೀತಿಯಲ್ಲಿ ಬರೆದಿದ್ದಾರೆ, ಲೇಖಕರಾದ ಡಾ. ಕೆ ಎನ್ ಗಣೇಶಯ್ಯ ನವರು. ಇವರು ಮೂಲತಃ ಜೀವ ಶಾಸ್ತ್ರ ವಿಜ್ಞಾನಿ ಎಂಬುದು ಸೋಜಿಗದ ಸಂಗತಿ.

ಶಾಲಭಂಜಿಕೆ ಎಂಬ ಶಿಲಾಬಾಲಿಕೆ 'ಮೋನಲಿಸ 'ಳಿಗೇ ಸಡ್ಡು ಹೊಡೆಯುವಷ್ಟು ಸುಂದರವಾಗಿದ್ದಳು. ಅ ಶಿಲಾಬಾಲಿಕೆಯನ್ನು ನಿರ್ಮಿಸಿದವ ಕೊಲೆಯಾದ ಕಥೆ, ಅದರ ಹಿಂದಿನ ಮರ್ಮ, ಕರ್ಮಗಳೆಲ್ಲವೂ ಕಥಾ ಸಂಕಲನದ ಮೊದಲ ಕಥೆಯಾದ 'ಶಾಲಭಂಜಿಕೆ' ಹೇಳುತ್ತದೆ. ಈ ಕಥೆಯನ್ನು ಓದಿದ ನಂತರ ನಿಮಗೆ ನನ್ನಂತೆಯೇ ಆ ಶಾಲಭಂಜಿಕೆಯನ್ನು ಜೀವನದಲ್ಲಿ ಒಮ್ಮೆ ನೋಡಬೇಕೆನ್ನಿಸದಿದ್ದರೆ ಕೇಳಿ. ಇಂದಿಗೂ ಅದು ಗ್ವಾಲಿಯರ್ ನಲ್ಲಿದೆಯಂತೆ.


ಹೀಗೆಯೇ ಪುಸ್ತಕದ ಪ್ರತಿಯೊಂದು ಕಥೆಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದೇ ಲೇಖಕರ ಶಕ್ತಿ. 'ಸೋಮನಾಥಪುರದ ವಿಷ್ಣು   ವಿಗ್ರಹ', 'ಬಿಳಿಗಿರಿ ರಂಗ ಬೆಟ್ಟದ ಜೇನುಗಳು'  ಬಗ್ಗೆಯ ಕಥೆಗಳು ನನಗೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅಂದ್ರೆ ಸಿಕ್ಕ ಸಿಕ್ಕವರಿಗೆಲ್ಲ ಅದರ ಬಗ್ಗೆಯೇ ಕೊರಿತಾಯ್ದ್ದೆ. ಕೆಲವು ಕಥೆಗಳನ್ನು ಹೆಣೆದಿರುವ ಶೈಲಿ ಏಕತಾನತೆ ಇಂದ ಕೂಡಿದ್ದರೂ, ಕಥಾವಸ್ತು ಮಾತ್ರ ಅತ್ಯಾಕರ್ಷಕ ಹಾಗು ಅತ್ಯಂತ ನವ್ಯ.

ಕನ್ನಡ ಸಾಹಿತ್ಯಕ್ಕೇ ಹೊಸ ಆಯಾಮ ಕೊಟ್ಟಿರುವ ಇಂತಹ ಪುಸ್ತಕಗಳು ಮತ್ತಷ್ಟು ಬರಲಿ ಎಂಬುದೇ ನನ್ನ ಆಶಯ.
ಉಪಯುಕ್ತ ಮಾಹಿತಿ:
ಪುಸ್ತಕದ ಹೆಸರು: ಶಾಲಭಂಜಿಕೆ
ಪ್ರಕಟಣೆ: ಛಂದ ಪುಸ್ತಕ
ದರ: ೮೦ ರೂಗಳು
ಪ್ರತಿಗಳು: ಸಪ್ನಾ ಬುಕ್ ಹೌಸಲ್ಲಿ ಲಭ್ಯ

ಕಾಸ್ ಕೊಟ್ಟು ಕನ್ನಡ ಪುಸ್ತಕ ಓದಿ!!
" ನೀನ್ ತಗಂಡಿದ್ಯಲ್ಲ ನಿಂದೇ ಒಸಿ ಕೊಡಪ್ಪ ಓದ್ಕೊಡ್ತಿವಿ "  ಅಂತ ಕೆಲವರು ನನ್ನ ಕೇಳಬಹುದು.
" ಸಾರಿ ಸರ್, ನೀವು ಕ್ಯೂನಲ್ಲಿದ್ದೀರಿ, ದಯವಿಟ್ಟು ನಿರೀಕ್ಷಿಸಿ "

೨೦೧೧ರ ಕೊನೆಯ ಬರವಣಿಗೆ.  ೨೦೧೨ ರಲ್ಲಿ ಸಿಗೋಣ ಗೆಳೆಯರೇ. 

~ ಶಶಾಂಕ  

PLASTIC PROBLEMS

ಕಾಲೇಜಲ್ಲಿದ್ದಾಗ ಬರೆದಿಟ್ಟುಕೊಂಟಿದ್ದ ಒಂದು ಹಾಳೆ ಕೈಗೆ ಸಿಕ್ಕಿತು. ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ನ್ಲಿ ನಡೆದ 'ONE LINER" ಕಾಂಪಿಟೇಷನ್ಗಾಗಿ ನಾನು ಮತ್ತು ನನ್ನ ಗೆಳೆಯ ಹರ್ಷಲ್ ಕೆಲವು ONE LINER ಗಳನ್ನು ಸೃಷ್ಟಿಸಿದ್ವಿ. ಸ್ಪರ್ಧೆಯ ಥೀಮ್ "NO PASTICS" ಆಗಿತ್ತು. ಬರೆದ ಹತ್ತು ಹನ್ನೊಂದು ಒನ್ ಲೈನರ್ಗಳನ್ನು ಸಬ್ಮಿಟ್ ಮಾಡಿದ್ವಿ. ಅಲ್ಲಿ ಹೇಗೆ ಕೊಟ್ಟಿದ್ವೋ, ಹಾಗೆಯೆ ಇದನ್ನು ಈ ಕೆಳಗೆ ನಿಮ್ಮ ಮುಂದಿಟ್ಟೇದೇನೆ.

ಓದಿ, ಮನಸ್ಸಾದ್ರೆ (ತಾಕತ್ತಿದ್ದರೆ !!) ಪ್ಲ್ಯಾಸ್ಟಿಕ್ ಬಳಕೆ ಕಮ್ಮಿ ಮಾಡಿ !!
ಪ್ರಥಮ ಬಹುಮಾನ ಗೆದ್ದ ಈ ಸಂಗ್ರಹ ಈಗ ಸಾರ್ವಜನಿಕವಾಗುತ್ತಿದೆ. ಸ್ಪರ್ಧೆಯಲ್ಲಿ ಎಷ್ಟ್ ಜನ ಭಾಗವಹಿಸಿದ್ರು ಅಂತ ಮಾತ್ರ ಕೇಳ್ಬೇಡಿ !!
  • Who told death is in the hands of God, its just 50p in market.

  • Plastics play a major role in our life, ofcourse it does play with our life.

  • Today, ' life without plastic ' is a dream. If this prevails,     ' life ' would be a dream, tomorrow.

  • Mother earth is busy in research work for the enzyme 'plasticase'.

  • We can't bury it, we can't burn it, then? Just forget it  !!

  • Fifty percent of the world is PLASTIC FREE, but the other half is "FREE TO PLASTIC".

  • The most ironical phrase the world has ever seen is the one here - NO PLASTIC ZONE.

  • I strictly said 'NO' to plastics, but they just do not seem to listen.

  • Plastics act like as if they are the Genetic Materials of Destruction.

  • Remember the VTU laminated marks card which we used to get for each semester ?? I could not digest the marks, Mother Earth can not digest the card.

  • Cycling keeps us healthy, recylcing keeps us ALIVE --> The Prize winning one.

ಲೇಡೀಸ್ ಪ್ರಾಬ್ಲಮ್ಮು - ಅಣಕ ಹಾಡು


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಪ್ರತಿಯೊಬ್ಬ ಹೆಣ್ ಮಗ್ಳೀಗೂ ಇರ್ತಾನೊಬ್ ಗಂಡ್ಸು
ಅವ್ನ್ ಸಾಚ ಆಗಿರೋದು ನಿಮ್ ಲಕ್ ಡಿಪೆಂಡ್ಸು
ಎಲ್ಲೇ ಇದ್ರೂನು ನೀವ್, ಹೆಂಗೇ ಇದ್ರೂನು ನೀವ್
ಲೇಡೀಸ್ ಅಂದ್ರೆ ಜೊಲ್ ಸುರ್ಸೊ ಜೆಂಟಲ್ ಮೆನ್ಸು
ಹುಡ್ಗೀರ್ನ ಕಣ್ಣಲ್ಲೇ ಅಳೆಯೋ ರೀಟೇಲ್ ಮರ್ಚೆಂಟ್ಸು..

ಥೂ.. ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಯೂನಿಫಾರ್ಮ್ ಲಿ ಮುದ್ ಮುದ್ದಾಗಿ ಕಾಣ್ಸ್ತಿದ್ದೆ ನಾನು, ಸ್ಕೂಲ್ನಲ್ಲಿದ್ದಾಗ
ಲಾಸ್ಟ್ ಬೆಂಚಲ್ಲಿ ಕೂತ್ಕೊಂಡು ತುಂಬಾ ಸೌಂಡ್ ಮಾಡ್ತಾ ಇದ್ದ, ಅವ್ನ್ ಹೆಸರು ನಾಗ
ಯಾವ್ನೊ ಒಬ್ಬ ಕೆಮ್ದಂಗಾಯ್ತು, ಹಿಂದಕ್ಕ್ ತಿರುಗಿ ನೋಡೇಬಿಟ್ಟೆ
ನಾಗ ನನ್ನ ನೋಡ್ತಾ ಇದ್ದ, ಘುರಾಯ್ಸ್ತಾದ್ದ ಸಿಕ್ಕಾಬಟ್ಟೆ..

ವಯಸೀಗೆ ಬರುವ ಮುನ್ನವೇ, ಕಾಳು ಹಾಕ್ಸ್ಕೊಳೋ ಹಕ್ಕಿ ಆಗ್ಬಿಟ್ಟೆ
ಅಷ್ಟು ಬೇಗ ಎಷ್ಟೋ ಹುಡುಗರ ಭಗ್ನ ಪ್ರೇಮಕೆ ಕಾರಣವಾಗ್ಬಿಟ್ಟೆ..


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಸು |
ಊರಿಗ್ ಮುಂಚೆ ಬೆನ್ನಿಗಂಟೊ ಇಲ್ಲದ್ ಅಫೇರ್ಸು ||

 ~ ಒಂದು ಹೆಣ್ಣಿನಂತೆ ಯೋಚಿಸಿ ಬರೆದದ್ದು. ಜನಪ್ರಿಯವಾದರೆ ಮುಂದ್ವರೆಸ್ತೀನಿ. ಇಲ್ದಿದ್ರೆ ಬ್ಲಾಗು ಇಷ್ಟೇನೆ !!!

ಓಂ - LATEST

THIS COULD GO TO LIMCA OR GUINNESS FOR THE TIME AT WHICH I AM REVIEWING A MOVIE.. !! i.e 16 years after the movie's release

ಅದೇನೊ ಗಾದೆ ಹೇಳ್ದಂಗಾಯ್ತು ಈಗ ನಾನು ಮಾಡ್ತಾಯ್ರೊ ಕೆಲ್ಸ. ಏನಪ್ಪ ಅಂದ್ರೆ, ಓಂ ಚಿತ್ರದ ವಿಮರ್ಶೆ. ಚಿತ್ರ ರಿಲೀಸಾಗಿ ಹದಿನಾರು ವರ್ಷವಾದರೂ, ಈಗ್ಲೂ ಥಿಯೇಟರಲ್ಲಿ ಹಾಕ್ದಾಗ ಥಿಯೇಟರ್ ಓನರುಗಳಿಗೇ ಮೋಸವಾಗದಂತ ಮಾರ್ಕೆಟ್ ಇಟ್ಟಿದೆ. ನಂಬಿದ್ರೆ ನಂಬಿ, ಈಗ್ಲೂ, ನಾಲ್ಕೈದು ಕಡೆ ಓಡ್ತಾಯ್ದೆ. ನೆನ್ನೆ ತಾನೇ ಮಗದೊಮ್ಮೆ ಚಿತ್ರ ನೋಡಿದ ನನಗೆ, ಅಲ್ಲಿಯ TURNOVER ಆಶ್ಚರ್ಯಗೊಳಿಸಿತು. HOUSEFULL ಆಗ್ದಿದ್ರೂ,ಕಳೆದ ವಾರ ನೋಡಿದ 'ಚಿನ್ನದ ತಾರೆ'ಯ 'ವಿವಾಹ ಗೃಹ'ಕ್ಕೆ ಬಂದಿದ್ದ ಜನಕ್ಕಿಂತ ಜಾಸ್ತಿ ಇದ್ರು ಅನ್ನೋದು ಅತಿಶಯೋಕ್ತಿಯಲ್ಲವೇಯಲ್ಲ. ನನ್ನ ಮುಂದಿನ ಸಾಲುಗಳಲ್ಲಿ ಚಿತ್ರದ ಬಗ್ಗೆ ನನಗನ್ನಿಸಿದುದನ್ನು ಮುಂದಿಡ್ತಿನಿ. ಓದಿ. ನಿಮ್ಗು ಅದೇ ಅನ್ಸಿದ್ರೆ ನಾನು ಧನ್ಯ.

- 1995ರಲ್ಲಿ ಜನರ ಮುಂದೆ ಈ ಚಿತ್ರ ಬಂದಾಗ, ಜನರಿಗ ಈ ಚಿತ್ರದಿಂದ ಸಿಕ್ಕಿದ್ದು ABSOLUTE ಹೊಸತನ. ಚಿತ್ರರಂಗದ ಆ ಟೈಮ್ನಲ್ಲಿ 'ಎಂದೂ ಕಂಡು ಕೇಳರಿಯದ ಚಿತ್ರ '.

- ಇಲ್ಲಿಯ ತನಕ ಬಂದಿರುವ ಎಲ್ಲಾ ರೌಡಿಸಂ ಚಿತ್ರಗಳ ದೊಡ್ಡಪ್ಪ ಈ ಓಂ.

- ಚಿತ್ರ ನಿರೂಪಣೆಯಲ್ಲಿ 'ಉಪೇಂದ್ರತನವಿದೆ'. ಉದಾ: ಒಬ್ಬ ರೌಡಿ ಅವನ ವೈರಿಯನ್ನ ನೋಡಿ, 'CHASE' ಅಂತ ಫಿಲ್ಮಿ ಸ್ಟೈಲಲ್ಲಿ ಕಿರ್ಚ್ತಾನೆ. ಕ್ಯಾಮೆರ ಸಡನ್ನಾಗಿ ಚೇಸಿಂಗ್ ಸೀನಿಗ್ತಾನೆ ಹೋಗದು? ಇಲ್ಲಿ ಹೋಗಲ್ಲ. ಟೀವಿ ಸ್ಕ್ರೀನಿನತ್ತ ಹೋಗತ್ತೆ. ಮೋಟಾರ್ ರೇಸಿಂಗ್ ಬರ್ತಾಯ್ರತ್ತೆ. ಅಲ್ಲಿಂದ ಕ್ಯಾಮೆರ, ಚೇಸಿಂಗ್ ಸೀನಿಗೆ ಹೋಗತ್ತೆ. ಅದು ಕೊಡೋ ಎಫೆಕ್ಟ್ ಪ್ರೇಕ್ಷಕನಿಗೆ ಖುಷಿಯಾಗತ್ತೆ. ಆ ಕಾಲಕ್ಕೇ ಅದು ತುಂಬಾನೇ ಬ್ಯೂಟಿಫುಲ್.

- ಶಿವಣ್ಣನ ವೀಕ್ನೆಸ್ಸ್ ಗಳನ್ನು ಮರೆಮಾಚಿ, ಅವರ STREGNTHS ಗಳನ್ನೇ ಹೈಲೈಟ್ ಮಾಡಿರೋ ಅಂಥ ಚಿತ್ರ. ಕ್ರೆಡಿಟ್ಸ್ ಟು ಉಪೇಂದ್ರ.

- ಬ್ಯಾಗ್ರೌಂಡ್ ಸ್ಕೋರ್ ಚೆನ್ನಾಗಿದೆ. ಚಿತ್ರ ಸಂಗೀತ ಅದ್ಭುತ. ಈಗ್ಲೂ ಜನ ವಿಸಲ್ ಹೊಡಿತಿದ್ರು. ವಿಸಲ್ ಶಬ್ದ ಅಸೆಂಡಿಂಗ್ ಆರ್ಡರಲ್ಲಿ. ಬ್ರಹ್ಮಾನಂದ < ಮೆಹಬೂಬಾ < ಕಾಲೇಜ್ ಕುಮಾರ < ಓ ಗುಲಾಬಿಯೇ (ಅಣ್ಣವ್ರ ಸಾಂಗ್ ಗೇ ಜಾಸ್ತಿ ವಿಸಲ್ ಬಂದಿದ್ದು)

- ನಿಜವಾದ ರೌಡಿಗಳ ಕೈಲೇ ಅವರವರ ಪಾತ್ರ ಮಾಡ್ಸಿದ್ದು ಸೂಪರ್ ಡೂಪರ್ ಪಬ್ಲಿಸಿಟಿ ಗಿಮಿಕ್ - ತನ್ವೀರ್, ಜೇಡ್ರಳ್ಳಿ ಕೃಷ್ಣಪ್ಪ ಬೆಕ್ಕಿನ ಕಣ್ಣು ರಾಜೇಂದ್ರ etc.

- ಮತ್ತು, ಬಹು ಮುಖ್ಯವಾಗಿ ಚಿತ್ರಕಥೆ, ಅದರ ಪ್ಲಾಟ್ ಜನಕ್ಕೆ ಹಿಡಿಸಿತು. ಚಿತ್ರ ಗೆಲ್ತು, ಓಡ್ತು, ಓಡ್ತಾಯ್ದೆ. ನಂತರ ಸಾವಿರ ಓಂ ಗಳು ಬಂದ್ವು. ಆದರೆ ಓಂ ಗಿದ್ದ ಓಂಕಾರ ಬೇರೆ ಯಾವ್ದಕ್ಕೂ ಬರ್ಲಿಲ್ಲ ಬಿಡೀ.

ನೆರೆ-ಹೊರೆ

ಅದು ಬೆಂಗಳೂರು. ಅಲ್ಲಿರುವ ಲೆಕ್ಕವಿಲ್ಲದಷ್ಟು ಕ್ರಮ, ಅಕ್ರಮ, ಸಕ್ರಮ ಅಪಾರ್ಟ್ಮೆಂಟುಗಳಲ್ಲಿ ಅದೂ ಒಂದು. ಸುಮಾರು ಇನ್ನೂರು ಫ್ಲ್ಯಾಟುಗಳಿರಬಹುದು. ರಾಜು ಟಿಪ್ ಟಾಪ್ ಆಗಿ ರೆಡಿ ಆಗಿ ಬಂದು ಫ್ಲ್ಯಾಟೊಂದರ ಮುಂದೆ ನಿಲ್ತಾನೆ. ಅವನ ಬಳಿ ಇದ್ದ ಒಂದಿಷ್ಟು ಬೀಗಗಳಲ್ಲಿ ಬಾಗಿಲನ್ನು ತೆಗೆಯಲು ಪ್ರಯತ್ನಿಸುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಬೀಗ ತೆರೆಯುತ್ತೆ. ಎಂದಿಗಿಂತ ಇವತ್ತು ಬೇಗ ಸಿಗ್ತಲ್ಲಾ ಅಂತ ಒಳಗೆ ಖುಷಿಪಟ್ಟು ಫ್ಲ್ಯಾಟ್ ಒಳಹೊಕ್ತಾನೆ. ಹೌದು ಅವನ ವೃತ್ತಿಯೇ ಅದು.


ಪರರ ಸ್ವತ್ತು ಹೊಲಸು ಅನ್ನೋ ಗಾದೆ ಅವನಿಗಿಲ್ಲ. ಅವನಿಗೆ ಪರರ ಸ್ವತ್ತೇ ಪರಮಾನ್ನ. ಎಂದಿನಂತೆ ಈ ದಿನವೂ ಅವನ ಬ್ಯಾಗಿಗೆ ಸಿಕ್ಕಿದ್ದು ತುಂಬಿಸಲು ಅಣಿಯಾಗ್ತಾನೆ. ದೊಡ್ ದೊಡ್ ವಸ್ತುಗಳಿಗೆ ಕೈ ಹಾಕದೆ ಸಿಕ್ಕ ಸಿಕ್ಕ ವಾಚು, ಕೂಲಿಂಗ್ ಗ್ಲಾಸು, ಕ್ಯಾಮೆರಾ, ಚಿಲ್ಲರೆ ಹಣ, ಆಭರಣಗಳು, ಸೀರೆ ಇತ್ಯಾದಿ ಅವನ ಮಜಬೂತಾದ ಬ್ಯಾಗಿಗೆ ತುಂಬಿಸಿ ಮತ್ತೇನಾದ್ರೂ ಸಿಗತ್ತಾ ಅಂತ ನೋಡ್ತಿರ್ಬೇಕಾದ್ರೆ ಅವನು ಒಳಗಿನಿಂದ ಬೋಲ್ಟ್ ಹಾಕಿದ್ದ ಮನೆಯ ಕದವನ್ನ ಆಚೆಯಿಂದ ಯಾರೋ ತಟ್ತಾರೆ. ಇವನ ಎದೆ ಒಂದೇ ಬಾರಿಗೆ ಧಸಕ್ ಅನ್ನತ್ತೆ.


ಅವನ ಅನುಭವದಲ್ಲಿ ಈ ರೀತಿ ಆದದ್ದು ಇದೇ ಮೊದಲು. ಇಂತ ಪರಿಸ್ಥಿತಿಯಲ್ಲಿ ಏನು ಮಾಡ್ಬೇಕೆಂದು ತಿಳಿಯದೇ ಕುಗ್ಗಿಹೋಗ್ತಾನೆ. ಆಚೆಯಿಂದ ಬಡಿತ ಹೆಚ್ಚಾಗುತ್ತಲೇ ಇವನಿಗೆ ಅಪಾರ್ಟ್ಮೆಂಟ್ ಸೆಕುರಿಟಿಯ ಆಜಾನುಬಾಹು ದೇಹ ಕಣ್ಮುಂದೆ ಬರುತ್ತದೆ. ಮನೆಯವರು ಯಾರದರೂ ಇದ್ದರೆ, ಅವರನ್ನು ತಳ್ಳಿ ಓಡಿಹೋಗಬಹುದೇ, ಹಾಗೆ ಮಾಡಿದರೂ ಅಪಾರ್ಟ್ಮೆಂಟ್ ಗೇಟ್ ತನಕ ಹೋಗುವಷ್ಟರಲ್ಲಿ ಸೆಕುರಿಟಿಯವರಿಗೆ ಸುದ್ದಿ ಮುಟ್ಟದೇ ಇರುತ್ತದಯೇ , ಮುಂತಾದವು ಇವನ ಮನಸ್ಸಿನಲ್ಲಿರುವಂತೆಯೇ ಆಚೆಕಡೆ ಇದ್ದ ನಳಿನಾ ಆಂಟಿ ಮತ್ತೊಮ್ಮೆ ಬಾಗಿಲು ಬಡೀತಾಳೆ.


ನಳಿನಾ ಆಂಟಿ ಸೆಮಿ ಸಿಲ್ಕ್ ಸೀರೆಯುಟ್ಟು , ಮ್ಯಾಚಿಂಗ್ ಸ್ಲೀವ್ಲೆಸ್ಸ್ ಬ್ಲೌಸ್ ತೊಟ್ಟು, ಕೂದಲನ್ನು ಜಡೆಯೂ ಅಲ್ಲದ, ಜುಟ್ಟೂ ಅಲದ ನಾಟ್ ತರಹದ ಹೇರ್ ಸ್ಟೈಲೊಂದಿಗೆ ಹೈ ಹೀಳ್ಡ್ ಚಪ್ಪಲಿ ತೊಟ್ಟಿರುತ್ತಾಳೆ. ಅವಳು ತುಂಬಾ ಅರ್ಜೆಂಟ್ ಕೆಲಸದಲ್ಲಿರುವಂತೆ ಮತ್ತೊಂದು ಬಾರಿ ಬಾಗಿಲು ಬಡಿಯುತ್ತಾಳೆ , ಅದೇ ಲಾಸ್ಟ್ ಚ್ಯಾನ್ಸ್ ಎಂದು ಮನಸ್ಸಿನಲ್ಲಂದುಕೊಂಡು. ಇತ್ತ ರಾಜು ಭಂಡ ಧೈರ್ಯ ಮಾಡಿ ಬಾಗಿಲು ತೆರೆಯುತ್ತಾನೆ, ಅವನ ಹೆಗಲೇರಿಸಿಕೊಂಡಿದ್ದ ಬ್ಯಾಗನ್ನು ಬದಿಗಿಟ್ಟು. ಹೆಂಗಸನ್ನು ನೋಡಿ ಕೊಂಚ ಹಗುರಗೊಂಡರೂ ಅವಳೇ ಮನೆಯೊಡತಿಯಾಗಿದ್ದರೆ ಎಂಬ ಪ್ರಶ್ನೆ ಮನಸ್ಸಿಗೆ ಬರುವ ಹೊತ್ತಿಗೆ, ಅವಳು -


HELLO MISTER, ನಾನು ನಿಮ್ ಪಕ್ಕದ್ ಫ್ಲ್ಯಾಟಲ್ಲಿರೋದು. ACTUALLY ನಾನು ನಮ್ಮ ಸಂಘದ ಮೀಟಿಂಗೊಂದಕ್ಕೆ ಅರ್ಜೆಂಟ್ ಹೊರಡ್ಬೇಕು. ನನ್ ಹಸ್ಬೆಂಡ್ ಇನ್ ಒನ್ ಟು ಹಾರ್ಸ್ ನಲ್ಲಿ ಬರ್ತಾರೆ. ಬಂದ್ರೆ ಒಂದ್ಚೂರು ಈ ಕೀ ಕೊಡ್ತೀರಾ?
ರಾಜುವಿನ ಮನಸ್ಸು ಕಕ್ಕಾಬಿಕ್ಕಿಯಾಗತ್ತೆ. ಬಾಯಿಗೆ ಬೀಗ ಹಾಕ್ದಂಗ್ ಆದ್ರೂ, ಕಷ್ಟಪಟ್ಟು ಬಾಯಿ ಬಿಡ್ತಾನೆ - ಓಕೆ. ಶ್ಯೂರ್. ಐ ವಿಲ್ ಟೇಕ್ ಕೇರ್ ಅಂತಾನೆ...




ಬೆಂಗಳೂರಿನ ಮನೆ-ಫ್ಲ್ಯಾಟುಗಳಲ್ಲಿ ಅಕ್ಕ ಪಕ್ಕದ ಮನೆಯವರ ಈಗಿನ ಪರಿಸ್ಥಿತಿಯೇ ಈ ಬರವಣಿಗೆಗೆ  ಸ್ಫೂರ್ತಿ.
ಬೃಹತ್ ಬೆಂಗಳೂರು - ಸಂಕುಚಿತ ಮನಸ್ಸುಗಳು !!

ಬಣ್ಣದ ತೆವಲು - COLOR "BLIND"NESS...



ಟೈಟಲ್ಲೇ ಭಯಾನಕ ಹಾರ್ಷಾಗಿದೆ ಅಲ್ವೆ? ಏನ್ ಮಾಡೊದು !! ಯಾವನ್ ಜಗತ್ತೇ ಸರಿಯಿಲ್ಲ ಅಂತ ಬೈತಾ ಇರ್ತಾನೋ, ಅವ್ನು ತುಂಬಾ ದೊಡ್ಡವನು ಅಂತ ಅನ್ಸ್ಕೊತಾನಂತೆ. ನಾನು ದೊಡ್ ಮನುಷ್ಯ ಆಗ್ಬೇಕು ಅಂತಾನೇ ಈ ಟೈಟಲ್ ಇಟ್ಟಿರೋದು.

ಭ್ರಷ್ಟಾಚಾರದ ವಿರುದ್ಧ ನಡೆದ ಅಣ್ಣಾ ಆಂದೋಲನದಲ್ಲಿ, ನಮ್ಮ ದೇಶದ ಯೂತ್ ಪವರ್ ವರ್ಕ್ ಆಗಿದೆ ಅನ್ನೋದು ಎಲ್ಲರೂ ಒಪ್ಪುವ ವಿಷಯ. ಆದ್ರೆ ಇಷ್ಟ್ ದಿನ, ಅಂದ್ರೆ ಐ ಮೀನ್ ಅಣ್ಣಾ ಬರೋ ತನಕ ನಮ್ಮ ದೇಶದ ಯೂತ್ ಗೆ,ಏನ್ ಯೌವ್ವನ ಮೈಗೆ ಹತ್ತಿರ್ಲಿಲ್ಲ್ವಾ? ಹತ್ತಿತ್ತೋ, ಬತ್ತಿತ್ತೋ ಅವೆಲ್ಲಾ ಗೊತ್ತಿಲ್ಲ.. ಅಣ್ಣಾ ಮತ್ತು ದೇಶದ ಮಧ್ಯೆ ಇದ್ದ, ಭ್ರಷ್ಟಾಚಾರದ ವಿರುದ್ಧ ಕೂಗುವ ಸಮಾನ ಮನಸ್ಕತೆ ನಮ್ಮನ್ನು ಇವತ್ತು ಇಲಿಗೆ ತಂದ್ ನಿಲ್ಸಿದೆ.


OK. ಮತ್ತೆ, ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಕಣ್ರಪ್ಪ. ಏನ್ ಹಬ್ಬದ ಆದ್ಮೆಲೆ ವಿಷ್ ಮಾಡ್ತಾ ಇದಾನೆ ಅಂತ ಬೈಕೊಬೇಡಿ. I JUST WANTED TO SPEAK SOMETHING ABOUT THIS AND THUS USED THE STRATEGY OF WISHING YOU ALL. ಸ್ವಲ್ಪ ಕನ್ನಿಂಗ್ ನಾನು. OK, ತಲಾಹರಟೆಗಳನೆಲ್ಲಾ ಬದಿಗಿಟ್ಟು, ಟಾಪಿಕ್ ಗೆ ಬರೋಣ. ಬಾಲ್ ಗಂಗಾಧರ ತಿಲಕರು ಮಹತ್ತರ ಉದ್ದೇಶದಿಂದ ರೋಡ್ ರೋಡಲ್ಲೂ ಗಣಪನ್ನ ಪೂಜಿಸಿ ಅಂಥ್ಹೇಳಿದ್ರು. ಎಲ್ರೂ ಕೈ ಜೋಡ್ಸಿದ್ರು, ತಿಲಕರು ದೊಡ್ಡೋವ್ರಾದ್ರು. ಇವತ್ತಿಗೂ ಅವ್ರ ಹೆಸ್ರು ಉಳ್ಸೋಹಂಗೆ ನಮ್ ಜನ ಅದನ್ನ ನಡ್ಸ್ಕೊಂಡ್ ಬರ್ತಾ ಇದಾರೆ.

ಪ್ರಾಬ್ಲಮ್ ಇರೋದು ಇಲ್ಲೇ !!
ನಮ್ಗಳಿಗೆ ಅದೇನ್ ಅರ್ಥ ಆಗಲ್ವೋ ಎನೋಪ್ಪ.. ಎಲ್ಲಿ ನೊಡಿದ್ರೂ, ಬಣ್ಣದ ಗಣಪತಿ ವಿಗ್ರಹಗಳದ್ದೇ ಕಾರುಬಾರು. ಸುಮ್ನೆ ವಿಜಯ ಕರ್ನಾಟಕದಲ್ಲಿ ಬಂದ ಈ STATISTICS ಮೇಲೆ ಕಣ್ಣು ಹಾಯಿಸಿ. ಮೀಟ್ರು ಆಫ್ ಆಗತ್ತೆ.

"ರಾಜ್ಯದಲ್ಲಿ ಈ ಬಾರಿ 50 ರಿಂದ 70 ಲಕ್ಷ ಗಣಪನ ಮೂರ್ತಿಗಳು ನೀರಿನಲ್ಲಿ ಕರಗಲಿವೆ. ಇದರಲ್ಲಿ ಶೇ.80 ರಷ್ಟು ಬಣ್ಣದ ಗಣೇಶನದ್ದೇ ದರ್ಬಾರು. ಇದರಿಂದ 3 ಸಾವಿರಕ್ಕು ಹೆಚ್ಚು ಕೆರೆಗಳು ಮಲಿನಗೊಳ್ಳಲಿವೆ. ಸೇಂಟ್ ಜಾನ್ಸ್ ಆಸ್ಪತ್ರೆಯ ಡಾ.ವೆಂಕಟೇಶ್ ಅವರ ಪ್ರಕಾರ, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮೂತ್ರಪಿಂಡ ವೈಫಲ್ಯ, ಕರುಳು ಬೇನೆ, ಕ್ಯಾನ್ಸರ್, ಮೆದುಳು ರೋಗಗಳಿಗೆ ತುತ್ತಾಗಿದ್ದರೆ! 8 ವರ್ಷದೊಳಗಿನ ಚಿಣ್ಣರ ದೇಹಕ್ಕೆ ವಿಷ ಸೇರುತ್ತವೆ. "

ಇದನ್ನ ಓದಿದ್ಮೇಲೂ ನಾವ್ ಬಣ್ಣದ ಗಣಪನನ್ನೇ ತಂದು ಕೂರಸ್ತೀವಿ ಅಂದ್ರೆ, ನಮಗಿಂತ ದೊಡ್ಡ ದೇಶಭ್ರಷ್ಟರು, ಇದಕ್ಕಿಂತ ದೊಡ್ಡ್ SCAM ಯಾವ್ದೂ ಇಲ್ಲ ಬಿಡಿ. ಇನ್ ಕೆಲವರು," ಅಯ್ಯೋ ನಾವ್ ಬಕೀಟಲ್ಲೇ ಮುಳ್ಗುಸ್ಬಿಡ್ತೀವಿ. ನಾವ್ ಕೆರೆ ತಮ ಓಗದೇ ಇಲ್ಲ ಅಂತ ಸಮಜಾಯಿಷಿ ಕೊಡ್ತಾರೆ ". ಅದಕ್ಕೆ ನನ್ನ ಉತ್ತರ - "ವಿಗ್ರಹ ಕರಗಿದ ನೀರನ್ನು, ನಾವ್ ಹಾಕೋದು ಪಾಪ ಕಲ್ಪವೃಕ್ಷ ಎನಿಸಿಕೊಂಡ ತೆಂಗಿನ ಮರಕ್ಕೇ ಹೊರತು, ಮೋರಿಗಲ್ಲ. ನಮ್ ಜನಗಳಿಗೆ ವಿಗ್ರಹ ಕರಗಿಸಿದ ನೀರನ್ನ ಚರಂಡಿಗೆ ಹಾಕೊ ಧೈರ್ಯ ಎಲ್ಲಿಂದ ಬರತ್ತೆ ಬಿಡಿ (ನಮ್ ದೇಶದಲ್ಲಿ ಭಕ್ತಿಗಿಂತ, ಭಯ ಜಾಸ್ತಿ ಅಲ್ವೇ!! ). ತೆಂಗಿನ ಮರಕ್ಕೊ, ಏರಿಯಾದಲ್ಲಿರುವ ಅರಳಿ ಮರಕ್ಕೋ ಹಾಕ್ತೀವಿ. GROUND WATERನ ರೇಪ್ ಮಾಡ್ತೀವಿ( I MEAN ಕೆಡ್ಸ್ತೀವಿ. I WANTED TO USE A HARSH WORD - EXCUSE ME ).

ಇನ್ನು ನಮ್ ದೇಶಕ್ಕೆ LOKPAL BILL ದೊರಕಿಸಿಕೊಟ್ಟ ಯುವಜನತೆ, ಅವ್ರ್ಗಳ ಮನೆಯಲ್ಲಿ, ಕಾಲೋನಿಗಳಲ್ಲಿ ಮಣ್ಣಿನ ಗಣಪನನ್ನೇ ತರುವಂತೆ ಆ ವಿಘ್ನನಿವಾರಕನೇ ಬುದ್ಧಿ ಕೊಡ್ಲಿ. ಆ ಗಟ್ಟಿ ಬಣ್ ಬಣ್ಣದ್ ಗಣಪತಿಗಳನ್ನ ನೋಡ್ಬೆಕಾದ್ರೆ ಭಕ್ತಿನೇ ಬರಲ್ಲ, WHEN WE THINK OF THE AFTER EFFECTS. IT SHOULD NO HAPPEN LIKE THAT ಅಲ್ವಾ?? LETS BE MORE RESPONSIBLE AND SENSIBLE.

ಗಣೇಶ ಎಂಥ ಅದ್ಭುತ ಕ್ಯಾರೆಕ್ಟರ್ ಅಂದ್ರೆ, ಅವನ್ ತಾಯಿಗೆ ಪ್ರಸವ ವೇದನೆ ಕೊಡ್ಬಾರ್ದು ಅಂತ, ಪಾರ್ವತಿಯ ಬೆವರಿನಿಂದ ಜನಿಸಿದ ಮಹಾನುಭಾವ. ಅಂಥವನನ್ನ ನಾವು ಪೂಜೆ ನೆಪದಲ್ಲಿ ಪ್ರಕೃತಿ ಮಾತೆಗೆ ನೋವು ಕೊಡ್ತಾಯಿದ್ದೀವಿ. ಇದು ಎಷ್ಟರ ಮಟ್ಟಿಗೆ ಸರಿ !!

ಇನ್ನೂ ಬರಿತಾ ಹೋದರೆ ಪೇಜ್ ಗಟ್ಟಲೇ ಗೀಚಬಹುದು.

ಅಥವಾ ಒಂದು ಲೈನಲ್ಲೇ ಹೇಳ್ಬಹುದು ಅನ್ನೋದಾದ್ರೆ
-LET THE CELEBRATIONS BE COLORFUL.
NOT THE IDOL !!

ಟೆಕ್ಕಿ - ಯಾವ್ ನಾಯೀನೂ ಮರ್ಯಾದೆ ಕೊಡಲ್ಲ

ನಮಸ್ಕಾರ. ಸ್ವಾಗತ - ಸುಸ್ವಾಗತ ನನ್ನ ಮೂರನೆ ಬರಹಕ್ಕೆ. SORRY ಸ್ವಲ್ಪ ಲೇಟ್ ಆಯ್ತು ಇದನ್ನ ಬರೆಯಲು. ನೋಡಿ, ದೊಡ್ ದೊಡ್ ಸಾಹಿತಿಗಳಾದ್ರೆ RAW MATERIALಗಾಗಿ ಹುಡುಕ್ಕೊಂಡು ಹೋಗ್ತಾರೆ. ಅವರ ಬರವಣಿಗೆಯ ಕಚ್ಚಾ ವಸ್ತುಗಾಗಿ ಊರೂರ್ ಅಲ್ದಾಡ್ತಾರೆ. ಸ್ವಾನುಭವ ಪಡ್ಕೊಂಡ್ ಬರೀತಾರೆ. ಆದ್ರೆ ನಂಗೆ ಆ RAW MATERIAL ಲೇ ಕಷ್ಟ. ಸಿಕ್ಕಿದ್ರೂ ಸ್ವಲ್ಪ CONTROVERSIAL. ಇರಲಿ. ವಿಷಯಕ್ಕೆ ಬರೋಣ.

ನಾಯಿ - ದತ್ತಾತ್ರೇಯರ ಅಪರಾವತಾರ ಅಂತ ದೊಡ್ಡವ್ರು ಹೇಳ್ತಾರೆ. ಸುಮಾರು ದತ್ತPHOTOS ಗಳಲ್ಲಿ, ಆ ರವಿವರ್ಮನ ಸಮಕಾಲೀನ ಚಿತ್ರಕಾರರು "ದತ್ತ"ನೊಡನೆ ನಾಯಿಯನ್ನು ಚಿತ್ರಿಸಿದ್ದಾರೆ. HISTORY ಕೆದಕೋಕ್ಕೆ ಟೈಮು ಇಲ್ಲ, PERSEVARANCE ಊ ಇಲ ಬಿಡಿ. ಆದ್ರೆ ಅ ವಿಷಯದ ಬಗ್ಗೆ ಒಂದೆರಡು ಪ್ರಶ್ನೆಗಳು ಹಂಗೆ ನನ್ ಮನಸ್ಸೆಂಬ TEMPORARY MEMORY ಲಿ ಹಾದುಹೋಗ್ತಾಯಿದೆ. ಮೊದಲನೆಯದು, COSTLY ನಾಯಿಗಳಾದ GOLDEN RETRIEVER, LABRADOR, GERMAN SHEPERD ಮುಂತಾದವುಗಳೂ ದತ್ತನ ಅವತಾರನಾ? ಎರಡೆನೆಯದು, ಈ ಬೆಂಗಳೂರಿನ ನಾಯಿಗಳನ್ನು ದತ್ತನ ನಾಯಿಗಳೆಂದರೆ ಆ ದೇವರು ನಮ್ಮನ್ನ ಕ್ಷಮಿಸ್ತಾನ? ಅಂತ. ಮೊದಲನೆಯ ಪ್ರಶ್ನೆ ಇವತ್ತಿಗೆ OUT OF SYLLABUS.

ಇಂದು ನಾನ್ ಹೇಳಬೇಕೆಂದುಕೊಂಡದ್ದು ಬೆಂಗಳೂರಿನ ಕೆಲವು ತೆರನಾದ ಬೀದಿ ನಾಯಿಗಳು ಮತ್ತು ಟೆಕ್ಕಿಗಳ ಸಂಭಂದದ ಬಗ್ಗೆ. ಒಂದ್ ಹಳೇ SMS JOKE ಹೀಗನ್ನತ್ತೆ - ಬೆಂಗಳೂರಿನ ಮಧ್ಯರಾತ್ರಿಯ ಯಾವುದೊಂದು ಮೂಲೆಯಲ್ಲಿ ನಿಂತು ಕಲ್ಲು ಹೊಡೆದರೂ, ಅದು ಬೀಳೋದು ಒಂದು ಬೀದಿ ನಾಯಿಗೆ ಅಥವ ಒಬ್ಬ ಐಟಿ ಉದ್ಯೋಗಿಗಂತೆ !! TATA INDICA ವನ್ನೂ ಈ ಲಿಸ್ಟಿಗೆ ಸೇರಿಸಬಹುದು. ಅದಿರಲಿ. ಈ ನಾಯಿಗಳಿಗೆ , ಟೆಕ್ಕಿಗಳ ಕಂಡರೆ ಒಂದು ನಯಾಪೈಸೆ ಮರ್ಯಾದೆ ಬೇಡ್ವಾ?? ನಾನು ಒಬ್ಬ ಸೋ ಕಾಲ್ಡ್ ಟೆಕ್ಕಿ (ಥೂ!! ಯಾಕೊ ಒಂದು ಚೂರು ಹೆಮ್ಮೆನೇ ಆಗ್ತಾ ಇಲ್ಲ - ಎಂತಹ ದೌರ್ಭಾಗ್ಯ). ನನ್ನ ಡೈಲಿ ಲೈಫ್ ಈ ಬೀದಿ ನಾಯಿಗಳಿಂದ ತುಂಬಾನೆ ಹಾಳಗಿದೆ. ನಾನು ಒಂದು ಸ್ಪೋರ್ಟ್ಸ್ ಸೈಕಲ್ ಕೊಂಡು ಆಫೀಸ್ ಗೆ ಹೋಗೋಣ, ಶೋಕಿ ಮಾಡಣ, ಪರಿಸರ ಸಂರಕ್ಷಣೆ ಚೂರು ಪಾರು ಆಗ್ಲಿ ಅಂತ ಅಂದ್ಕೊಂಡೆ. ನಾನ್ ಓಡಾಡೊ ದಾರಿಯ ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆರಗಾಗಿ ಆ PLAN DROP ಮಾಡ್ಬೇಕಾಯ್ತು. ಅಲ್ಲದೆ, ಬೈಕಿನಲ್ಲೂ ಆ ದಾರಿಲಿ ಹೊಗಲು ಮೀಟರ್ ಇಲ್ದೆ ಎರಡು ಮೂರು ಕಿಲೋಮೀಟರ್ ದೂರ ಆದ್ರು ಬಳಸ್ಕೊಂಡು, ಬೇರೆ ದಾರಿಲಿ ಹೋಗ್ತಿನಿ ನಾನು - ಪೆಟ್ರೋಲ್ ಹಾಕ್ಸೋಕ್ ಸಾಲ ಮಾಡ್ಬೇಕಾದ ಈ ಕಾಲದಲ್ಲೂ. ಈ ವಿಷಯನಾ ನಾನು ಅಣ್ಣಾವ್ರಿಗೆ ಹೇಳಿ ಅವರಿಂದ ಉಪವಾಸ ಮಾಡ್ಸ್ತಿನಿ !! ಒಂದ್ಸಾರಿ ನಮ್ ಟೀಮ್ ಮೇಟ್ ಒಬ್ಬನಿಗೆ ಇದೇ ಬೀದಿ ನಾಯಿ ಕಚ್ಚಿ ಅವನು SICK LEAVE ತಗೊಂಡ. ನಾಯಿ ಕಚ್ಚಿದೆ ಅಂತ ಬರೀ ಡವ್ ಮಾಡ್ತನೆ ಇವ್ನು ಅಂತ ONSITE ಇಂದ ಬೊಬ್ಬೆ ಹೊಡೆದರು. ಪಾಪ ನಿಜ್ವಾಗಿ ನಾಯಿ ಕಚ್ಚಿಸಿಕೊಂಡ ಈತನಿಗು-ಬೊಬ್ಬೆ ಹೊಡೆದವನಿಗು ಸ್ವಲ್ಪ ದಿನದ ವೈಮನಸ್ಯಕ್ಕೆ ಬೀದಿ ನಾಯಿಗಳೇ ಕಾರಣ ಅಂದರೆ ತಪ್ಪಾಗಲಾರದು.

ಒಂದು ಬಾರಿ ಮುಗ್ಧವಾಗಿ ನಿಂತಿದ್ದ ನನ್ನ ಬೈಕನ್ನು ಹುಲಿಯೊಂದು ಬಂದು ಎಳೆದುಕೊಂಡು ಹೋಯಿತು. ನಾನು ನನ್ನ ಬೈಕನ್ನು ಮರು ಪಡೆಯಲು ಹೋಗಬೇಕಾದ ಜಾಗಕ್ಕೆ ಹೋದೆ. ಅಲ್ಲಿಯೂ ನಾನೊಬ್ಬ ಟೆಕ್ಕಿ ಅಂತ ಗೊತ್ತಾಗಿ ಅಲ್ಲಿಯವರು ನನಗೆ ಮರ್ಯಾದೆ ಕೊಡಲಿಲ್ಲ. ಅಲ್ಲಿಯವನೊಬ್ಬ ಅವನೇ ಸರ್ವಾಧಿಕಾರಿಯಂತೆ ಆಡುತಿದ್ದ. ನನ್ನ ಬೈಕನ್ನು ನಾನು ಹಿಂತಿರುಗಿ ಪಡೆಯಲು ಅವನಿಂದ ಅಸಹ್ಯ ಮಾತುಗಳನ್ನು ಕೇಳಬೇಕಾಯಿತು. ಅಷ್ಟರೊಳಗೆ ಹುಲಿ ಬಂತು. ಗಾಡಿ ಇಳಿಸಿತು. ಸರ್ಕಾರಕ್ಕೆ ಹಣ ಕೊಟ್ಟು ಗಾಡಿಯನ್ನು ಬಿಡಿಸಿಕೊಂಡೆ. ಇನ್ನು ಕೆಲವರು ಪೂರ್ತಿ ಹಣವನ್ನು ಕೊಡದೆ (ಆ ಹಣ ಉಳಿಸಿ ಏನ್ ಡಾಲರ್ಸ್ ಕಾಲೊನಿಲಿ ಸೈಟ್ ತಗೊಳಕ್ಕಾಯ್ತದ???) ಚಿಲ್ಲರೆ ಕೊಟ್ಟು ಬಿಡಿಸಿಕೊಂಡರು. ನಾಯಿಗಳಿಗೆ ಅರ್ಧ ರೊಟ್ಟಿ ಸಿಕ್ಕರೂ ಸಾಕಲ್ಲ!!

ಅಂದೇ ನಂಗೆ ತಿಳಿಯಿತು. ಯಾವ್ದೇ ನಾಯಿನೂ ನನ್ನಂಥವರಿಗೆ ಮರ್ಯಾದೆ ಕೊಡೊಲ್ಲ ಅಂತ. ಅದಕ್ಕೆ ನಾನು ತೀರ್ಮಾನ್ ಮಾಡಿರೊದು ಏನಂದ್ರೆ ಇನ್ಮುಂದೆ ಆಫೀಸ್ ಇಂದ ಆಚೆ ಬಂದೊಡನೆ ID CARD ತೆಗೆದು ಜೇಬಲ್ಲಿ ಇಟ್ಕೊಳಣ ಎಂದು !!!!!!!!!!!!!!

!! ಪ್ರೈವೇಟ್ ಏರಿಯಾ !!


ಮಟ ಮಟ್ ಮಧ್ಯಾಹ್ನ. ಮಲ್ಕೊಂಡ್ರೆ ಮತ್ ಬರ್ಸೊ ಅಷ್ಟು ನಿದ್ದೆ ಬರೋ ಸಮಯ. UNFORTUANTELY, ನಂಗೆ LIGHT ಆಗಿ ತಲೆ ನೋವು. ನಿದ್ದೆ ಮಾಡೊ MOOD ಇರ್ಲಿಲ್ಲ. ಒಂದೆರಡು TEASPOON "ನವರತ್ನ" ಎಣ್ಣೆ ಹಚ್ಚಿದ್ ಮೇಲೆ ಸ್ವಲ್ಪ RELIEF ಆಯ್ತು. ಈ "ನವರತ್ನ" OIL ನನ್ನ ಪ್ರಕಾರ ತಲೆ ನೋವಿಗೆ ಅದ್ಭುತ MEDICINE. OFCOURSE!! AMRUTHANJAN FORMULAನ ಎಣ್ಣೆಗೆ ಮಿಕ್ಸ್ ಮಾಡಿದ್ರೆ ಎಂಥಾ ತಲೆ ನೋವಿದ್ರು ಓಯ್ತದೆ ಬುಡಿ. ಓಂಥರಾ ಒಳ್ಳೆ 'IDEA' ನೇ ನಮ್ ನವರತ್ನ ದ್ದು. ಸದ್ಯ ಅಭಿಷೇಕ್ ಬಚ್ಚನ್ AD ನಲ್ಲಿ ಇಲ್ಲ ಅಷ್ಟೆ !

ಯಾಕೋ ಅವತ್ತು ಬೆಜಾನ್ ಬೋರ್ ಹೊಡಿತಾಯ್ತು. MOVIE?? USUALLY, ಕನ್ನಡ ಬಿಟ್ರೆ ಬೇರೆ ಭಾಷೆ ಚಿತ್ರ ನೋಡೊ ಅಭ್ಯಾಸನೇ ಇಲ್ಲದವ ನಾನು. ನೋಡಿದ್ರೂ ಎಂಟಮಾವಾಸ್ಯೆಗೊಂದಿನ. THAT DAY WAS ONE OF THOSE DAYS. ಒಂದು CD ತಗೊಂಡ್ ಬರೋಣಾ ಅಂತ ಹೊರಟೆ ಗುರು. ದೂರದ್ ಸಿಗ್ನಲ್ ಹತ್ರ ಒಂದು CD ಅಂಗಡಿ ನೋಡಿದ್ದೆ. ಹೆಲ್ಮೆಟ್ ಹಾಕಿಲ್ಲ ಅನ್ನೋ ಕಾರಣಕ್ಕೆ, ಮೇನ್ ರೋಡಿನ ಎಡಭಾಗಕ್ಕೆ ಇದ್ದ ಒಂದ್ ಸಣ್ಣ MUD ROAD ಲಿ ಗಾಡಿ ನಿಲ್ಸಿ, CD ಅಂಗಡಿ ಎಡೆಗೆ ನಡೆದೆ.ಒಂದು CD ತಗೊಂಡೆ. ಯಾವ್ CD ತಗೊಂಡೆ ಆನ್ನೋದು ಕಥೆಗೆ ಅನವಶ್ಯಕವಾದ್ರೂ ಓದುಗರ ಮನದಲ್ಲಿ ಅಪಾರ್ಥ "MOOD"ಬಾರ್ದು ಅಂತ ಹೇಳ್ತಿನಿ (ದಮ್ ಮಾರೊ ದಮ್ - ಹಿಂದಿ ಚಿತ್ರ).

CD ಗೆ 30 ರೂ ಕೊಟ್ಟು, ಎಲ್ಲಿ ಗಾಡಿ ನಿಲ್ಸಿದ್ನೋ, ಅಲ್ಲಿಗೆ ಬಂದೆ. ಅಷ್ಟರೊಳಗೆ, MUD ROAD ನ ಆ ಭಾಗದಿಂದ, ಒಬ್ಬ BALD HEAD ಮನುಷ್ಯ ಸ್ಕೂಟಿಯಲ್ಲಿ ಬಂದ. ಹಿಂದೆ ಒಬ್ಬಾಕೆ ಮಧ್ಯವಯಸ್ಕ ಹೆಣ್ಣುಮಗಳು - ಗಂಡ ಹೆಂಡತಿ ಇರ್ಬೌದು, ಗೊತ್ತಿಲ್ಲ. ಆ ಮನ್ಶಾ, ಚಡ್ಡಿ-ಟಿಶರ್ಟ್ ಧರಿಸಿದ್ದ. ಎಲ್ಲಾ NORMAL MAN ಥರಾ ಇದ್ದ. ಆದ್ರೆ ಅವ್ನ SIDELOCK ತುಂಬ ಉದ್ದನೆಯದಾಗಿತ್ತು- APPROXIMATELY, ನನ್ನ ಮಧ್ಯ ಬೆರಳಿನಷ್ಟು!! ಇದು ಸ್ವಲ್ಪ ABNORMAL, STRANGE ಅನ್ಸ್ತು ನಂಗೆ. ಇನ್ನೂ STRANGE ಘಟನೆ ಅಲ್ಲಿ ನಡಿತು. 


ಆ SIDELOCK ಮನ್ಸಾ, ನನ್ ಹತ್ರ ಬಂದು- " YOU CANT PARK HERE" ಅಂದ. ALMOST ಹೊರಟಿದ್ದ ನಾನು, ಇವ್ನ ನೋಡಿ, ಇವ್ನ್ ಯಾವ್ ಸೀಮೆ ಗೌಡ ನನ್ಗೆ (ನನ್ಗೇ) ರೋಪ್ ಹಾಕ್ತಾವ್ನಲ್ಲ ಅಂದ್ಕೊಂಡು - I HAVE NOT PARKED HERE. I AM JUST STANDING WITH MY BIKE ಅಂದೆ (ಬೆರೇನೂ ಹೇಳಲು ಹೊಳೆಯದೆ).ಅವ್ನು - YOU BLOODY IDIOT. YOU JUST CANT PARK HERE. DO NOT GIVE RUBBISH REASONS. ಅಂತ RAISE ಆದ. ವಿನಾಕಾರಣ ಈ ಥರಾ ಆವಾಜ್ ಹಾಕ್ತಾ ಇರೋದು ನೋಡಿ ನಂಗೆ ಶಾಕ್ ಆಯ್ತು. ಆದ್ರೆ ಹೆದ್ರಿರ್ಲ್ಲಿಲ್ಲ. BUT ಮಾತೆ ಬರ್ತಾ ಇಲ್ಲ. ಆದ್ರು ಸ್ವಾಭಿಮಾನಕ್ಕೆ ಧಕ್ಕೆ ಬರ್ಬಾದು ಅಂತ ಮಾತ್ ಮುಂದ್ವರ್ಸ್ದೆ. LOOK ಕೊಡ್ತಾಯ್ದ್ದೆ. ** ಉರ್ಕೊಂಡ ಆತ. ವಾದಕ್ಕೆ ವಾದ. ಮಾತಿಗೆ ಮಾತು. ನಮ್ ದೇಶ್ದಲ್ಲಿ ನಡೆಯೋ ಸಾವಿರಾರು ಬೀದಿ ಜಗಳಗಳಲ್ಲಿ ಇದೂ ಒಂದಾಗಿತ್ತು. ಆದ್ರೆ SCRIPT ENGLISH ನಲ್ಲಿತ್ತು ಅಷ್ಟೇ. ಕೊನೆಗೆ ಸೋತಿದ್ದು ನಾನೆ. ಅದು ಅವ್ನ ಜಾಗ ಅಂತೆ. ATLEAST BOARD ಆದ್ರೂ ಹಾಕ್ಸಪ್ಪ ಅಂತ ಹೇಳ್ಬಿಟ್ ಹೊರಟೆ.

ದೂರದಲ್ಲಿ ಅವ್ನ ಬಂಗಲೆ ಇತ್ತು. PRIVACY ಬೇಕು ಅಂತ ರೋಡ್ ನೇ ಕೊಂಡ್ಕೊಂಡ್ಬಿಟ್ಟಿದ್ದ ಆಸಾಮಿ. PEOPLE ALSO OWN ROADS WITH BUNGALOW ಅಂತ ನಂಗೇನ್ ಗೊತ್ತಿತ್ತಾ ?? ಅದು ಅವ್ನ PRIVATE AREA. ಹಾಗಾದ್ರೆ ಬೆಂಗ್ಳೂರ್ ಕನ್ನಡ ದವರ PRIVATE AREA ಅಲ್ವಾ?? NO CHANCE !!!!!!!!!!!!

ಈ ಘಟನೆ ನಡೆದ್ ಮೇಲೆ ನಂಗೊತ್ತಾಗಿದ್ದು, ಈ ಥರಾ ಬೆಂಗ್ಳೂರ್ಲ್ಲಿ ಸಾವಿರಾರು ಇದೆ ಅಂತ (ಅಬ್ಬಬ್ಬಾ ಅಂದ್ರೆ ಒಂದೊ ಎರಡೊ ಕನ್ನಡದವರದ್ದು). ಮುಂದೆ ಲಕ್ಷಾಂತರವಾಗತ್ತೆ. ಹೀಗೆ ನಾವು ಬೆಂಗಳೂರನ್ನು ಇನ್ನೂ ಬೆಳೆ(ಕೊಳೆ)ಸೋಣ !!


ಜೈ ಭುವನೇಶ್ವರಿ ಮ್ಯಾಮ್!!

-
ಶಶಾಂಕ್ ಸೊಗಾಲ್

ನಾನು ಕೋಟಿಗೊಬ್ಬ ಅಲ್ಲ.. ನಾನು ಕೋಟಿಲೊಬ್ಬ

ನಮಸ್ಕಾರ ಗುರು.. ಇದು ನನ್ನ ಮೊದಲ ಬರವಣಿಗೆ. ಅಂದಹಾಗೆ ನನ್ ಡೈರಿಲಿ ಸುಮಾರ್ ಗೀಚಿದಿನಿ ಬಿಡಿ..
ಬ್ಲಾಗ್ನಲ್ಲಿ FIRST ONE. ಈ ಬ್ಲಾಗ್ನಲ್ಲಿ ಏನು ಚೆನ್ನಾಗಿಲ್ಲ, TITLE ಒಂದ್ ಬಿಟ್ಟು.. ಆದ್ರು ಓದದ್ ನಿಲ್ಲಿಸ್ಬೇಡಿ.. ನಿಮ್ಗೆ INTERESTING ವಿಷ್ಯಗಳು ಸಿಗ್ಬೋದು.. ಏನು, ಗಣಿಲಿ FIRST ಏ ಚಿನ್ನ ಸಿಕ್ಬಿಡತ್ತಾ ??
ಸ್ವಲ್ಪ OVER ಆದ್ರೆ ADJUST ಮಾಡ್ಕೊಳ್ಳಿ PLEASE. ಓದಿ, ಹರಸಿ...

ಹೆಸ್ರು- ಶಶಾಂಕ, ಊರು- ಮೈಸೂರು- ULTI ಊರು ಗುರು. ಹಂಗಂತ ವಲಸೆ ಬರ್ಬೇಡಿ please. ಈ ಊರಿನ ಬಗ್ಗೆ ತುಂಬಾ POSSESSIVENESS ಇರೊ ಎಷ್ಟೋ ಜನಗಳಲ್ಲಿ ನಾನು ಒಬ್ಬ. ಬನ್ನಿ, ಊರ್ ನೋಡಿ, ಖುಷಿಪಡಿ.. ಇಲ್ಲೆ settle ಆಗ್ಬೇಡಿ ಆದ್ರೆ. ನಿಮ್ಮೂರ್ ನಿಮ್ಗ್ ಚೆಂದ ಅಲ್ವ? OK OK.. SORRY FOR THE DEVIATION.

ನನ್ ಸರ್ ನೇಮ್ INTERESTING ಆಗಿದ್ಯಪ್ಪ. "ಸೋಗಾಲ್". SOUNDS LIKE NORTH INDIAN ಅಲ್ವಾ? ಆದ್ರೆಸೊಗಾಲಅನ್ನೋದು ಇಲ್ಲೇ ಚನ್ನಪಟ್ನ ಹತ್ರ ಹಳ್ಳಿ ಅಂತೆ.. ನಮ್ ಮುತ್ತಾತಂದ್ರು ಅಲ್ಲಿದ್ರಂತೆ. ಒಳ್ಳೆ MOOD  ಇದ್ದಾಗ, MYSORE ಕಡೆ ನಡ್ಕೊಂದ್ ಬಂದು SETTLE ಆದ್ರಂತೆ ಸದ್ಯ. ಇಲ್ಲ ಅಂದ್ರೆ ನಾನು MYSORE ಗೆ ಕೇವಲ ಟೂರಿಸ್ಟ್ ಆಗ್ತಿದ್ದೆ. ಹೀಗೆ ನನ್ನ ಹೆಸರು ಶಶಾಂಕ ಸೋಗಾಲ ಆಗಬೇಕಿದ್ದು, STYLE ಆಗಿ SOGHAL ಮಾಡ್ಕೊಂಡಿದಿನಿ. ಹೆಂಗೆ?  ONE MORE THING, ನಾನು ಸೊಗಾಲ ವನ್ನ ನೋಡೆ ಇಲ್ಲ.. ಏನ್ ನಮ್ ಮುತ್ತಾತಂದ್ರು, ಸೈಟ್ ಮೇಲ್ ಸೈಟ್ ಮಡ್ಗಿದ್ರಾ ಪದೆ ಪದೇ ಹೊಗಕ್ಕೆ?? ,ON A LITTLE HARSH SIDE.

ಎಲ್ಲರ ಹಾಗೆ ಅಷ್ಟೊ ಇಷ್ಟೊ MARKS ತೆಗೆದು 10th ಮುಗ್ಸಿ, ಇನ್ನು ಸ್ವಲ್ಪ ಬ*ಸಿ ಓದಿ PU ಮುಗ್ಸ್ದೆ. ಆಮೇಲ್ ಸೇರಿದ್ದು ಅಧ್ದೂರಿ ಕಾಲೇಜ್ - JCE. ಒಂಥರಾ ಹೆಸ್ರಲ್ಲೇ VIBRATION ಇಲ್ವಾ? ಅಲ್ಲಿ ಓದ್ದವ್ನ್ ಯಾವ್ ನನ್ ಮಗನ್ನಾದ್ರೂ ಕೇಳಿ..ಇಲ್ಲಾ ಅನ್ಬುಡ್ಲಿ.. ನಮ್ CM ಆಣೆಗು ಸತ್ಯ ಕಣ್ರಪ್ಪ.. !!
ಹೆಂಗೋ ಗೆರೆ ಮೇಲ್ ENGINEERING ಮುಗ್ಸಿ, ಅದಕ್ಕಿಂತ ಹೆಚ್ಚ್ ಗೆರೇಲಿ PLACE ಆಗಿ, ಸದ್ಯ ಮಾಯನಗರಿ ಬೆಂಗಳೂರಲ್ಲಿ ನೆಲೆಸಿದ್ದೇನೆ.. ಪ್ರತಿ ವಾರ  MISS ಮಾಡ್ದೆ MYSORE ಗೆ ಬರೊ ಒಳ್ಳೆ ಹುಡ್ಗ.

ಇನ್ನೂ LIFE ಅಲ್ಲಿ, ಒಂದು ನಯಾಪೈಸೆ ಸಾಧನೆ ಮಾಡಿಲ್ಲ..  ಅದಕ್ಕೆ ಹೇಳಿದ್ದು "ನಾನು ಕೋಟಿಗೊಬ್ಬ ಅಲ್ಲ.. ನಾನು ಕೋಟಿಲೊಬ್ಬ" ಅಂತ..
ಮುಂದೆ ಇನ್ನೂ ಬರಿತೀನಿ.. ಚೆನ್ನಾಗಿದ್ರೆ ಹೇಳಿ, ಚೆನ್ನಾಗಿಲ್ಲ ಅಂದ್ರೆ ಮಕ್ಕುಗಿರಿ..
ಓದಿ ಹರಸಿ !!
-
ಶಶಾಂಕ್ ಸೊಗಾಲ್