ಓಂ - LATEST

THIS COULD GO TO LIMCA OR GUINNESS FOR THE TIME AT WHICH I AM REVIEWING A MOVIE.. !! i.e 16 years after the movie's release

ಅದೇನೊ ಗಾದೆ ಹೇಳ್ದಂಗಾಯ್ತು ಈಗ ನಾನು ಮಾಡ್ತಾಯ್ರೊ ಕೆಲ್ಸ. ಏನಪ್ಪ ಅಂದ್ರೆ, ಓಂ ಚಿತ್ರದ ವಿಮರ್ಶೆ. ಚಿತ್ರ ರಿಲೀಸಾಗಿ ಹದಿನಾರು ವರ್ಷವಾದರೂ, ಈಗ್ಲೂ ಥಿಯೇಟರಲ್ಲಿ ಹಾಕ್ದಾಗ ಥಿಯೇಟರ್ ಓನರುಗಳಿಗೇ ಮೋಸವಾಗದಂತ ಮಾರ್ಕೆಟ್ ಇಟ್ಟಿದೆ. ನಂಬಿದ್ರೆ ನಂಬಿ, ಈಗ್ಲೂ, ನಾಲ್ಕೈದು ಕಡೆ ಓಡ್ತಾಯ್ದೆ. ನೆನ್ನೆ ತಾನೇ ಮಗದೊಮ್ಮೆ ಚಿತ್ರ ನೋಡಿದ ನನಗೆ, ಅಲ್ಲಿಯ TURNOVER ಆಶ್ಚರ್ಯಗೊಳಿಸಿತು. HOUSEFULL ಆಗ್ದಿದ್ರೂ,ಕಳೆದ ವಾರ ನೋಡಿದ 'ಚಿನ್ನದ ತಾರೆ'ಯ 'ವಿವಾಹ ಗೃಹ'ಕ್ಕೆ ಬಂದಿದ್ದ ಜನಕ್ಕಿಂತ ಜಾಸ್ತಿ ಇದ್ರು ಅನ್ನೋದು ಅತಿಶಯೋಕ್ತಿಯಲ್ಲವೇಯಲ್ಲ. ನನ್ನ ಮುಂದಿನ ಸಾಲುಗಳಲ್ಲಿ ಚಿತ್ರದ ಬಗ್ಗೆ ನನಗನ್ನಿಸಿದುದನ್ನು ಮುಂದಿಡ್ತಿನಿ. ಓದಿ. ನಿಮ್ಗು ಅದೇ ಅನ್ಸಿದ್ರೆ ನಾನು ಧನ್ಯ.

- 1995ರಲ್ಲಿ ಜನರ ಮುಂದೆ ಈ ಚಿತ್ರ ಬಂದಾಗ, ಜನರಿಗ ಈ ಚಿತ್ರದಿಂದ ಸಿಕ್ಕಿದ್ದು ABSOLUTE ಹೊಸತನ. ಚಿತ್ರರಂಗದ ಆ ಟೈಮ್ನಲ್ಲಿ 'ಎಂದೂ ಕಂಡು ಕೇಳರಿಯದ ಚಿತ್ರ '.

- ಇಲ್ಲಿಯ ತನಕ ಬಂದಿರುವ ಎಲ್ಲಾ ರೌಡಿಸಂ ಚಿತ್ರಗಳ ದೊಡ್ಡಪ್ಪ ಈ ಓಂ.

- ಚಿತ್ರ ನಿರೂಪಣೆಯಲ್ಲಿ 'ಉಪೇಂದ್ರತನವಿದೆ'. ಉದಾ: ಒಬ್ಬ ರೌಡಿ ಅವನ ವೈರಿಯನ್ನ ನೋಡಿ, 'CHASE' ಅಂತ ಫಿಲ್ಮಿ ಸ್ಟೈಲಲ್ಲಿ ಕಿರ್ಚ್ತಾನೆ. ಕ್ಯಾಮೆರ ಸಡನ್ನಾಗಿ ಚೇಸಿಂಗ್ ಸೀನಿಗ್ತಾನೆ ಹೋಗದು? ಇಲ್ಲಿ ಹೋಗಲ್ಲ. ಟೀವಿ ಸ್ಕ್ರೀನಿನತ್ತ ಹೋಗತ್ತೆ. ಮೋಟಾರ್ ರೇಸಿಂಗ್ ಬರ್ತಾಯ್ರತ್ತೆ. ಅಲ್ಲಿಂದ ಕ್ಯಾಮೆರ, ಚೇಸಿಂಗ್ ಸೀನಿಗೆ ಹೋಗತ್ತೆ. ಅದು ಕೊಡೋ ಎಫೆಕ್ಟ್ ಪ್ರೇಕ್ಷಕನಿಗೆ ಖುಷಿಯಾಗತ್ತೆ. ಆ ಕಾಲಕ್ಕೇ ಅದು ತುಂಬಾನೇ ಬ್ಯೂಟಿಫುಲ್.

- ಶಿವಣ್ಣನ ವೀಕ್ನೆಸ್ಸ್ ಗಳನ್ನು ಮರೆಮಾಚಿ, ಅವರ STREGNTHS ಗಳನ್ನೇ ಹೈಲೈಟ್ ಮಾಡಿರೋ ಅಂಥ ಚಿತ್ರ. ಕ್ರೆಡಿಟ್ಸ್ ಟು ಉಪೇಂದ್ರ.

- ಬ್ಯಾಗ್ರೌಂಡ್ ಸ್ಕೋರ್ ಚೆನ್ನಾಗಿದೆ. ಚಿತ್ರ ಸಂಗೀತ ಅದ್ಭುತ. ಈಗ್ಲೂ ಜನ ವಿಸಲ್ ಹೊಡಿತಿದ್ರು. ವಿಸಲ್ ಶಬ್ದ ಅಸೆಂಡಿಂಗ್ ಆರ್ಡರಲ್ಲಿ. ಬ್ರಹ್ಮಾನಂದ < ಮೆಹಬೂಬಾ < ಕಾಲೇಜ್ ಕುಮಾರ < ಓ ಗುಲಾಬಿಯೇ (ಅಣ್ಣವ್ರ ಸಾಂಗ್ ಗೇ ಜಾಸ್ತಿ ವಿಸಲ್ ಬಂದಿದ್ದು)

- ನಿಜವಾದ ರೌಡಿಗಳ ಕೈಲೇ ಅವರವರ ಪಾತ್ರ ಮಾಡ್ಸಿದ್ದು ಸೂಪರ್ ಡೂಪರ್ ಪಬ್ಲಿಸಿಟಿ ಗಿಮಿಕ್ - ತನ್ವೀರ್, ಜೇಡ್ರಳ್ಳಿ ಕೃಷ್ಣಪ್ಪ ಬೆಕ್ಕಿನ ಕಣ್ಣು ರಾಜೇಂದ್ರ etc.

- ಮತ್ತು, ಬಹು ಮುಖ್ಯವಾಗಿ ಚಿತ್ರಕಥೆ, ಅದರ ಪ್ಲಾಟ್ ಜನಕ್ಕೆ ಹಿಡಿಸಿತು. ಚಿತ್ರ ಗೆಲ್ತು, ಓಡ್ತು, ಓಡ್ತಾಯ್ದೆ. ನಂತರ ಸಾವಿರ ಓಂ ಗಳು ಬಂದ್ವು. ಆದರೆ ಓಂ ಗಿದ್ದ ಓಂಕಾರ ಬೇರೆ ಯಾವ್ದಕ್ಕೂ ಬರ್ಲಿಲ್ಲ ಬಿಡೀ.

3 ಕಾಮೆಂಟ್‌ಗಳು: