!! ಪ್ರೈವೇಟ್ ಏರಿಯಾ !!


ಮಟ ಮಟ್ ಮಧ್ಯಾಹ್ನ. ಮಲ್ಕೊಂಡ್ರೆ ಮತ್ ಬರ್ಸೊ ಅಷ್ಟು ನಿದ್ದೆ ಬರೋ ಸಮಯ. UNFORTUANTELY, ನಂಗೆ LIGHT ಆಗಿ ತಲೆ ನೋವು. ನಿದ್ದೆ ಮಾಡೊ MOOD ಇರ್ಲಿಲ್ಲ. ಒಂದೆರಡು TEASPOON "ನವರತ್ನ" ಎಣ್ಣೆ ಹಚ್ಚಿದ್ ಮೇಲೆ ಸ್ವಲ್ಪ RELIEF ಆಯ್ತು. ಈ "ನವರತ್ನ" OIL ನನ್ನ ಪ್ರಕಾರ ತಲೆ ನೋವಿಗೆ ಅದ್ಭುತ MEDICINE. OFCOURSE!! AMRUTHANJAN FORMULAನ ಎಣ್ಣೆಗೆ ಮಿಕ್ಸ್ ಮಾಡಿದ್ರೆ ಎಂಥಾ ತಲೆ ನೋವಿದ್ರು ಓಯ್ತದೆ ಬುಡಿ. ಓಂಥರಾ ಒಳ್ಳೆ 'IDEA' ನೇ ನಮ್ ನವರತ್ನ ದ್ದು. ಸದ್ಯ ಅಭಿಷೇಕ್ ಬಚ್ಚನ್ AD ನಲ್ಲಿ ಇಲ್ಲ ಅಷ್ಟೆ !

ಯಾಕೋ ಅವತ್ತು ಬೆಜಾನ್ ಬೋರ್ ಹೊಡಿತಾಯ್ತು. MOVIE?? USUALLY, ಕನ್ನಡ ಬಿಟ್ರೆ ಬೇರೆ ಭಾಷೆ ಚಿತ್ರ ನೋಡೊ ಅಭ್ಯಾಸನೇ ಇಲ್ಲದವ ನಾನು. ನೋಡಿದ್ರೂ ಎಂಟಮಾವಾಸ್ಯೆಗೊಂದಿನ. THAT DAY WAS ONE OF THOSE DAYS. ಒಂದು CD ತಗೊಂಡ್ ಬರೋಣಾ ಅಂತ ಹೊರಟೆ ಗುರು. ದೂರದ್ ಸಿಗ್ನಲ್ ಹತ್ರ ಒಂದು CD ಅಂಗಡಿ ನೋಡಿದ್ದೆ. ಹೆಲ್ಮೆಟ್ ಹಾಕಿಲ್ಲ ಅನ್ನೋ ಕಾರಣಕ್ಕೆ, ಮೇನ್ ರೋಡಿನ ಎಡಭಾಗಕ್ಕೆ ಇದ್ದ ಒಂದ್ ಸಣ್ಣ MUD ROAD ಲಿ ಗಾಡಿ ನಿಲ್ಸಿ, CD ಅಂಗಡಿ ಎಡೆಗೆ ನಡೆದೆ.ಒಂದು CD ತಗೊಂಡೆ. ಯಾವ್ CD ತಗೊಂಡೆ ಆನ್ನೋದು ಕಥೆಗೆ ಅನವಶ್ಯಕವಾದ್ರೂ ಓದುಗರ ಮನದಲ್ಲಿ ಅಪಾರ್ಥ "MOOD"ಬಾರ್ದು ಅಂತ ಹೇಳ್ತಿನಿ (ದಮ್ ಮಾರೊ ದಮ್ - ಹಿಂದಿ ಚಿತ್ರ).

CD ಗೆ 30 ರೂ ಕೊಟ್ಟು, ಎಲ್ಲಿ ಗಾಡಿ ನಿಲ್ಸಿದ್ನೋ, ಅಲ್ಲಿಗೆ ಬಂದೆ. ಅಷ್ಟರೊಳಗೆ, MUD ROAD ನ ಆ ಭಾಗದಿಂದ, ಒಬ್ಬ BALD HEAD ಮನುಷ್ಯ ಸ್ಕೂಟಿಯಲ್ಲಿ ಬಂದ. ಹಿಂದೆ ಒಬ್ಬಾಕೆ ಮಧ್ಯವಯಸ್ಕ ಹೆಣ್ಣುಮಗಳು - ಗಂಡ ಹೆಂಡತಿ ಇರ್ಬೌದು, ಗೊತ್ತಿಲ್ಲ. ಆ ಮನ್ಶಾ, ಚಡ್ಡಿ-ಟಿಶರ್ಟ್ ಧರಿಸಿದ್ದ. ಎಲ್ಲಾ NORMAL MAN ಥರಾ ಇದ್ದ. ಆದ್ರೆ ಅವ್ನ SIDELOCK ತುಂಬ ಉದ್ದನೆಯದಾಗಿತ್ತು- APPROXIMATELY, ನನ್ನ ಮಧ್ಯ ಬೆರಳಿನಷ್ಟು!! ಇದು ಸ್ವಲ್ಪ ABNORMAL, STRANGE ಅನ್ಸ್ತು ನಂಗೆ. ಇನ್ನೂ STRANGE ಘಟನೆ ಅಲ್ಲಿ ನಡಿತು. 


ಆ SIDELOCK ಮನ್ಸಾ, ನನ್ ಹತ್ರ ಬಂದು- " YOU CANT PARK HERE" ಅಂದ. ALMOST ಹೊರಟಿದ್ದ ನಾನು, ಇವ್ನ ನೋಡಿ, ಇವ್ನ್ ಯಾವ್ ಸೀಮೆ ಗೌಡ ನನ್ಗೆ (ನನ್ಗೇ) ರೋಪ್ ಹಾಕ್ತಾವ್ನಲ್ಲ ಅಂದ್ಕೊಂಡು - I HAVE NOT PARKED HERE. I AM JUST STANDING WITH MY BIKE ಅಂದೆ (ಬೆರೇನೂ ಹೇಳಲು ಹೊಳೆಯದೆ).ಅವ್ನು - YOU BLOODY IDIOT. YOU JUST CANT PARK HERE. DO NOT GIVE RUBBISH REASONS. ಅಂತ RAISE ಆದ. ವಿನಾಕಾರಣ ಈ ಥರಾ ಆವಾಜ್ ಹಾಕ್ತಾ ಇರೋದು ನೋಡಿ ನಂಗೆ ಶಾಕ್ ಆಯ್ತು. ಆದ್ರೆ ಹೆದ್ರಿರ್ಲ್ಲಿಲ್ಲ. BUT ಮಾತೆ ಬರ್ತಾ ಇಲ್ಲ. ಆದ್ರು ಸ್ವಾಭಿಮಾನಕ್ಕೆ ಧಕ್ಕೆ ಬರ್ಬಾದು ಅಂತ ಮಾತ್ ಮುಂದ್ವರ್ಸ್ದೆ. LOOK ಕೊಡ್ತಾಯ್ದ್ದೆ. ** ಉರ್ಕೊಂಡ ಆತ. ವಾದಕ್ಕೆ ವಾದ. ಮಾತಿಗೆ ಮಾತು. ನಮ್ ದೇಶ್ದಲ್ಲಿ ನಡೆಯೋ ಸಾವಿರಾರು ಬೀದಿ ಜಗಳಗಳಲ್ಲಿ ಇದೂ ಒಂದಾಗಿತ್ತು. ಆದ್ರೆ SCRIPT ENGLISH ನಲ್ಲಿತ್ತು ಅಷ್ಟೇ. ಕೊನೆಗೆ ಸೋತಿದ್ದು ನಾನೆ. ಅದು ಅವ್ನ ಜಾಗ ಅಂತೆ. ATLEAST BOARD ಆದ್ರೂ ಹಾಕ್ಸಪ್ಪ ಅಂತ ಹೇಳ್ಬಿಟ್ ಹೊರಟೆ.

ದೂರದಲ್ಲಿ ಅವ್ನ ಬಂಗಲೆ ಇತ್ತು. PRIVACY ಬೇಕು ಅಂತ ರೋಡ್ ನೇ ಕೊಂಡ್ಕೊಂಡ್ಬಿಟ್ಟಿದ್ದ ಆಸಾಮಿ. PEOPLE ALSO OWN ROADS WITH BUNGALOW ಅಂತ ನಂಗೇನ್ ಗೊತ್ತಿತ್ತಾ ?? ಅದು ಅವ್ನ PRIVATE AREA. ಹಾಗಾದ್ರೆ ಬೆಂಗ್ಳೂರ್ ಕನ್ನಡ ದವರ PRIVATE AREA ಅಲ್ವಾ?? NO CHANCE !!!!!!!!!!!!

ಈ ಘಟನೆ ನಡೆದ್ ಮೇಲೆ ನಂಗೊತ್ತಾಗಿದ್ದು, ಈ ಥರಾ ಬೆಂಗ್ಳೂರ್ಲ್ಲಿ ಸಾವಿರಾರು ಇದೆ ಅಂತ (ಅಬ್ಬಬ್ಬಾ ಅಂದ್ರೆ ಒಂದೊ ಎರಡೊ ಕನ್ನಡದವರದ್ದು). ಮುಂದೆ ಲಕ್ಷಾಂತರವಾಗತ್ತೆ. ಹೀಗೆ ನಾವು ಬೆಂಗಳೂರನ್ನು ಇನ್ನೂ ಬೆಳೆ(ಕೊಳೆ)ಸೋಣ !!


ಜೈ ಭುವನೇಶ್ವರಿ ಮ್ಯಾಮ್!!

-
ಶಶಾಂಕ್ ಸೊಗಾಲ್

4 ಕಾಮೆಂಟ್‌ಗಳು: