ಮಿಷನ್ ಇಂಪಾಸಿಬಲ್ಗೂ ಶಿವನಿಗೂ 'ಎತ್ತ'ಣಿಂ'ಎತ್ತ' ಸಂಬಂಧ...
ಅಂತ ನಿರ್ದೇಶಕ ಓಂಪ್ರಕಾಶ್ ರಾವ್ ಗೆ ಅದ್ಯಾವಾಗ್ ಕನಸು ಬಿದ್ದಿತ್ತೋ ಗೊತ್ತಿಲ್ಲ, ಹಂಗೆ ಅಲ್ಲಿಂದ ಸೀದಾ ತಂದು ಇಳಿಸಿದ್ದಾರೆ. ಅದಿರಲಿ ಬಿಡಿ. ಆ 'ಶಿವ'ನ ಮೇಲೆ ಭಾರ ಹಾಕಿ ಅದನ್ನ ಮರೆತುಬಿಡೋಣ.
ಸಮಾಧಾನದ ಸಂಗತಿಯೆಂದರೆ ಅಂತ ಹೊಸತನವಿಲ್ಲದಿದ್ದರೂ ಈ ಚಿತ್ರಕ್ಕೊಂದು ಕಥೆಯಿದೆ. ಅದೊಂದು ಸೇಡಿನ ಕಥೆ.
ನಾಯಕ (ಶಿವರಾಜಕುಮಾರ್) ಮತ್ತು ನಾಯಕಿಯ(ರಾಗಿಣಿ) ಪೋಷಕರು ಫ್ಯಾಮಿಲಿ ಫ್ರೆಂಡ್ಸ್. ನಾಯಕಿಯ ತಂದೆ ಪತ್ರಕರ್ತ, ನಾಯಕನ ತಂದೆ ಕುದುರೆ ಜಾಕಿ. ಇಬ್ಬರೂ ಪ್ರಾಮಾಣಿಕರು. ಅದೇ ಕಾರಣಕ್ಕೆ ಅವರನ್ನು ಮೂರು ಜನ ಖಳನಾಯಕರು ಕೊಂದುಹಾಕುತ್ತಾರೆ. ಇತ್ತ ನಾಯಕ ನಾಯಕಿ ಬೆಳೆದು ದೊಡ್ಡವರಾದ ಮೇಲೆ ತನ್ನ ಪೋಷಕರನ್ನು ಕೊಂದ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ 'ಶಿವ'.
ಈ ಕಥೆಯು ಚಿತ್ರಕಥೆ ಆಗುವ ಹಂತದಲ್ಲಿ ಕೊಂಚ ತಿರುವು ಮುರುವುಗಳನ್ನು ಕಂಡರೂ ಅವೆಲ್ಲ ಕನ್ನಡ ಪ್ರೇಕ್ಷಕನಿಗೆ ಹಳೇ ಮಾಲು. ಒಂದು ಗಟ್ಟಿ ನಿರೂಪಣೆ ಇದ್ದಿದ್ದರೆ ನಿರ್ಮಾಪಕರು ಸುರಿದ ದುಡ್ದಿಗಾದರೂ ಕಳೆ ಬರುತಿತ್ತು.
ಶಿವಣ್ಣ ಕಥೆಯ ಆಯ್ಕೆಯಲ್ಲಿ ಮತ್ತೊಮ್ಮೆ ದುಡುಕಿದಂತೆ ಭಾಸವಾದರೂ ಎಂದಿನಂತೆ
ತೆರೆಮೇಲೆ ಶಿವ ತಾಂಡವ ಅಭಿಮಾನಿಗಳಿಗೆ ಹಬ್ಬ. ನಿರ್ದೇಶಕರು ನಾಯಕಿಯ ಪಾತ್ರಕ್ಕೂ ಹೆಚ್ಚು ಒತ್ತುಕೊಟ್ಟಿರುವುದು ಪ್ರೋತ್ಸಾಹಕರ ಸಂಗತಿ.
ತೆರೆಮೇಲೆ ಶಿವ ತಾಂಡವ ಅಭಿಮಾನಿಗಳಿಗೆ ಹಬ್ಬ. ನಿರ್ದೇಶಕರು ನಾಯಕಿಯ ಪಾತ್ರಕ್ಕೂ ಹೆಚ್ಚು ಒತ್ತುಕೊಟ್ಟಿರುವುದು ಪ್ರೋತ್ಸಾಹಕರ ಸಂಗತಿ.
ಆದರೆ ರಾಗಿಣಿಯ ನಟನೆಯಲ್ಲಿ ಅಷ್ಟೇನೂ ವಿಶೇಷ ಇಲ್ಲದಿದ್ರೂ
ಅಂದ ಚಂದಕ್ಕೆ ತಕ್ಕ ವೇದಿಕೆ.
ಅಂದ ಚಂದಕ್ಕೆ ತಕ್ಕ ವೇದಿಕೆ.
ಖಳನಾಯಕರಾಗಿ ರವಿಶಂಕರ್ ಸುಮ್ಮನೆ ಧ್ವನಿ ಪ್ರದರ್ಶನ ಮಾಡಿದರೆ, ರಂಗಾಯಣ ರಘು ತೆಲುಗು ಮಿಕ್ಸ್ ಕನ್ನಡ ಅಷ್ಟೇನು
ರುಚಿಸುವುದಿಲ್ಲ. ಗುರುದತ್ ಪಾತ್ರಕ್ಕೆ ಮಹತ್ವವಿಲ್ಲ.
ಸತ್ಯ ಹೆಗಡೆ ಟಾಪ್ ಆಂಗಲ್ ಶಾಟ್ಸ್ ನಲ್ಲಿ ಕಾಣುವ ಕ್ಲೈಮ್ಯಾಕ್ಸ್ ದೃಶ್ಯ ಅವರ ಉತ್ತಮ ಕೆಲಸಕ್ಕೆ ಕನ್ನಡಿ. ಗುರುಕಿರಣ್ ಸಂಗೀತ ವೈನಾಗಿದ್ದರೂ ಚಿತ್ರದಲ್ಲಿ ಹಾಡುಗಳ ಕೆಟ್ಟ ಪ್ಲೇಸ್ಮೆಂಟ್ ಮತ್ತು ಸಾಧಾರಣ ಸಂಯೋಜನೆಯಿ0ದಾಗಿ ಸಪ್ಪೆಯಾಗಿ ಕಾಣುತ್ತದೆ.
ಬುಲೆಟ್ ಪ್ರಕಾಶ್, ಶೋಭರಾಜ್ ಮತ್ತು ಶಿವಣ್ಣ ರ ಮಧ್ಯೆ ನಡೆಯುವ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಜೀವಾಳ. ಪುಣ್ಯಕ್ಕೆ ಅವು ಬೇರೆ ಭಾಷೆಯಿಂದ ತಂದದ್ದಲ್ಲ ಎಂದು ನಂಬೋಣ.
ಚಿತ್ರದಲ್ಲಿ ಅಂತ ಹೇಳಿಕೊಳ್ಳುವ ಪಂಚಿಂಗ್ ಡೈಲಾಗ್ಸ್ ಇಲ್ಲದಿದ್ದರೂ
ಚಿತ್ರದಲ್ಲಿ ಅಂತ ಹೇಳಿಕೊಳ್ಳುವ ಪಂಚಿಂಗ್ ಡೈಲಾಗ್ಸ್ ಇಲ್ಲದಿದ್ದರೂ
ಅಭಿಮಾನಿಗಳು ಶಿವಣ್ಣನ ಅಭಿನಯ, ಸಾಹಸ, ನೃತ್ಯ ನೋಡಿ ತೃಪ್ತಿಪಡ್ಕೊಳ್ತಾರೆ.
ಆದರೆ ಒಂದು ಒಳ್ಳೆಯ ಚಿತ್ರನೋಡಬೇಕೆನ್ನುವ ಆಸೆಯಿಂದ ಬರುವ ಒಬ್ಬ ಕನ್ನಡ ಪ್ರೇಕ್ಷಕ ???
~ಹೊಗೆ