ಚಾರುಲತೆ ಮಲಗಿಸೋಲ್ಲ , ಹೆದರಿಸೋಲ್ಲ..
'ಅಲೋನ್' ಎಂಬ ಥೈಲ್ಯಾಂಡ್ ದೇಶದ ಸಿನಿಮಾ ಅವತರಣಿಕೆಯಾದ 'ಚಾರುಲತಾ' ಮಹಿಳಾ ಪ್ರಧಾನ ಚಿತ್ರ.
ಪ್ರಿಯಾಮಣಿ ಸಯಾಮಿ ಅವಳಿ ಜವಳಿಯಾಗಿ ನಟಿಸಿರುವುದು ಇಲ್ಲಿ ಗಮಾನರ್ಹ. ಕತೆಯ ಎಳೆಯು
ಉತ್ತಮವಾಗಿದುದರಿಂದಲೇ ಅಲ್ಲಿಂದ ಇಲ್ಲಿಗೆ ತಂದಿರುವುದು. ನಿರೂಪಣೆ ನೇರವಾಗಿರದೆ ರಿವರ್ಸ್ ಎನಿಸುವಂಥ ಶೈಲಿಯಲಿದ್ದರೂ ಅದೇನೋ ಅಷ್ಟು ಮಜಾ ಕೊಡೋಲ್ಲ.
ಚಾರು ಮತ್ತು ಲತಾ ಸಯಾಮೀಸ್ ಅವಳಿಗಳು. ಅನ್ಯೋನ್ಯವಾಗಿ ಬಾಳುವ ಅವರನ್ನು 'ಲಂಗ ದೋಸ್ತಿಗಳು' ಎನ್ನಬಹುದು.
ಈ ಲಂಗದೋಸ್ತಿಗಳ ನಡುವೆ ಒಬ್ಬ ಬಂದು ಇಬ್ಬರ ಬಿರುಕಿಗೆ ಕಾರಣವಾಗುತ್ತಾನೆ. ಚಾರು ಮತ್ತು ಲತೆ ಬೇರೆಯಾಗುವಾಗ
ಒಬ್ಬಳು ಸತ್ತು, ಒಬ್ಬಳು ಬದುಕುಳಿದಾಗ ಆರಂಭವಾಗುವುದೇ ಈ "never break a promise" ಕಥೆ.
ಪ್ರಿಯಾಮಣಿ ಗೆ ಅತ್ಯಂತ ವಿಶಿಷ್ಟ ಪಾತ್ರವನ್ನು ಕತೆ ಕಲ್ಪಿಸಿಕೊಟ್ಟರೂ ಅಂಥಾ ಅದ್ಭುತ ಎನ್ನುವ ಅಭಿನಯಕ್ಕೆ ಹೆಚ್ಚು ಅವಕಾಶವಿಲ್ಲ. ಆದರು ಪಾತ್ರಕ್ಕೆ ನ್ಯಾಯ ನೀಟಾಗಿ ಒದಗಿಸಿದ್ದಾರೆ. ಹೊಸ ಪರಿಚಯ ಸ್ಕಂದ ಗೆ ಸ್ಕೋಪ್ ಹೆಚ್ಚು ಇಲ್ಲ.
ರವಿಶಂಕರ್ ಮಂತ್ರಗಾರನ ಪಾತ್ರ ಬೇರೆ ದೇಶದ ಕಥೆಗೆ ನೇಟಿವಿಟಿ ಕೊಡುವ ಒಂದು ವ್ಯರ್ಥ ಪ್ರಯತ್ನ.
ಪಿ ಕುಮಾರ್ ನಿರ್ದೇಶನದಲ್ಲಿ ಮೂಡಿರುವ ಈ ಚಿತ್ರ ಅಲ್ಲಲ್ಲಿ ಉತ್ತಮವಾಗಿದ್ದರೂ ಒಟ್ಟಾರೆಯಾಗಿ ನೋಡಿದಾಗ ಸಪ್ಪೆಯಾಗಿದೆ.
ಪನ್ನೀರ್ ಸೆಲ್ವಂರ ಕ್ಯಾಮೆರ ಕೆಲಸದಲ್ಲಿ ಯಥೇಚ್ಚವಾಗಿ ಕ್ರೇನ್ ಬಳಸಿ ಕಥೆಯ ಮೂಡ್ ಸೆಟ್ ಮಾಡುತ್ತಾರೆ.
ಪ್ರಿಯಾಮಣಿಯನ್ನು ಸಯಾಮೀಸ್ ಅವಳಿಗಳಾಗಿ ತೋರಿಸುವಲ್ಲಿ ತಾಂತ್ರಿಕ ತಂಡ ಅತ್ಯಂತ ಯಶಸ್ವಿಯಾಗಿದೆ.
ಸುಂದರ್ ಸಿ ಬಾಬು ಸಂಗೀತ-ರಿರೆಕಾರ್ಡಿಂಗ್ ಯಾಕೋ ಸಾಧಾರಣ ಅನಿಸುತ್ತದೆ ಥೀಮ್ ಮ್ಯುಸಿಕನ್ನು ಹೊರತುಪಡಿಸಿ.
ಚಿತ್ರ ಮುಕ್ತಾಯವಾದರೂ ದೆವ್ವದ ಅಸ್ತಿತ್ವದ ಬಗ್ಗೆ ಸರಿಯಾದ ಚಿತ್ರಣ ಕೊಡದೆ ಪ್ರೇಕ್ಷಕರನ್ನು ಮೂಢನಂಬಿಕೆಗೆ ಗುರಿ ಮಾಡುವಲ್ಲಿ ಚಾರುಲತೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇದು ಮತ್ತೊಂದು 'ಆಪ್ತಮಿತ್ರೆ'ಯಾಗಲು ಕಷ್ಟವಾಗಬಹುದು.
ಹಾರರ್ ಸಿನಿಮಾ ಹಣೆಪಟ್ಟಿ ಹೊತ್ಕೊಂಡು ಬಂದಿರುವ ಈ ಸಿನಿಮಾ ತೀರ ಹೆದರಿಸುವುದೂ ಇಲ್ಲ. ಕಥೆಯ ವೈಶಿಷ್ಟ್ಯ, ಕೆಲವೊಂದು ತಿರುವುಗಳಿಂದ ಸುಮ್ಮನೆ ನಿಮ್ಮನ್ನು ಮಲಗಲೂ ಬಿಡುವುದಿಲ್ಲ ಈ ಚಾರುಲತಾ.
~ಹೊಗೆ