ಶಾಲಭಂಜಿಕೆ ಎಂಬ ಮನಃರಂಜಿಕೆ

ನಾನು ಈ ಹಿಂದೆ ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದಿದ್ದರೂ, ಅದರ ಬಗ್ಗೆ ಬರೀಬೇಕು ಅಂತ ಅನ್ನಿಸಿರಲಿಲ್ಲ. Of course, ಭೈರಪ್ಪ, ಅನಂತಮೂರ್ತಿ, ಕಾರಂತ, ತೇಜಸ್ವಿ ಮೊದಲಾದವರ ಸಾಹಿತ್ಯದ ಬಗ್ಗೆ ನಾನೇನ್ ಹೇಳೋದಿರತ್ತೆ.  ಪುಸ್ತಕ ಪ್ರೇಮಿಗಳು ಮುಗಿಬಿದ್ದು ಓದ್ತಾರೆ.

ಆದರೆ ಇಲ್ಲೊಂದು ಪುಸ್ತಕದ ಬಗ್ಗೆ ನಾನು ಹೇಳಲೇಬೇಕು. ಅದು ಛಂದ  ಪುಸ್ತಕ ಪ್ರಕಟಿಸಿರುವ ಶಾಲಭಂಜಿಕೆ ಎಂಬ ಮೈನವಿರೇಳಿಸುವ ಕಥಾ ಸಂಕಲನ. ಇತಿಹಾಸ ಮತ್ತು ವಿಜ್ಞಾನದ ಅಜ್ಞಾತ ಸತ್ಯಗಳ ಅಡಿಗಟ್ಟಿನಲ್ಲಿ ಹೆಣೆಯಲಾದ ಕಥೆಗಳು ರೋಚಕ ಎನಿಸುವ ರೀತಿಯಲ್ಲಿ ಬರೆದಿದ್ದಾರೆ, ಲೇಖಕರಾದ ಡಾ. ಕೆ ಎನ್ ಗಣೇಶಯ್ಯ ನವರು. ಇವರು ಮೂಲತಃ ಜೀವ ಶಾಸ್ತ್ರ ವಿಜ್ಞಾನಿ ಎಂಬುದು ಸೋಜಿಗದ ಸಂಗತಿ.

ಶಾಲಭಂಜಿಕೆ ಎಂಬ ಶಿಲಾಬಾಲಿಕೆ 'ಮೋನಲಿಸ 'ಳಿಗೇ ಸಡ್ಡು ಹೊಡೆಯುವಷ್ಟು ಸುಂದರವಾಗಿದ್ದಳು. ಅ ಶಿಲಾಬಾಲಿಕೆಯನ್ನು ನಿರ್ಮಿಸಿದವ ಕೊಲೆಯಾದ ಕಥೆ, ಅದರ ಹಿಂದಿನ ಮರ್ಮ, ಕರ್ಮಗಳೆಲ್ಲವೂ ಕಥಾ ಸಂಕಲನದ ಮೊದಲ ಕಥೆಯಾದ 'ಶಾಲಭಂಜಿಕೆ' ಹೇಳುತ್ತದೆ. ಈ ಕಥೆಯನ್ನು ಓದಿದ ನಂತರ ನಿಮಗೆ ನನ್ನಂತೆಯೇ ಆ ಶಾಲಭಂಜಿಕೆಯನ್ನು ಜೀವನದಲ್ಲಿ ಒಮ್ಮೆ ನೋಡಬೇಕೆನ್ನಿಸದಿದ್ದರೆ ಕೇಳಿ. ಇಂದಿಗೂ ಅದು ಗ್ವಾಲಿಯರ್ ನಲ್ಲಿದೆಯಂತೆ.


ಹೀಗೆಯೇ ಪುಸ್ತಕದ ಪ್ರತಿಯೊಂದು ಕಥೆಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದೇ ಲೇಖಕರ ಶಕ್ತಿ. 'ಸೋಮನಾಥಪುರದ ವಿಷ್ಣು   ವಿಗ್ರಹ', 'ಬಿಳಿಗಿರಿ ರಂಗ ಬೆಟ್ಟದ ಜೇನುಗಳು'  ಬಗ್ಗೆಯ ಕಥೆಗಳು ನನಗೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅಂದ್ರೆ ಸಿಕ್ಕ ಸಿಕ್ಕವರಿಗೆಲ್ಲ ಅದರ ಬಗ್ಗೆಯೇ ಕೊರಿತಾಯ್ದ್ದೆ. ಕೆಲವು ಕಥೆಗಳನ್ನು ಹೆಣೆದಿರುವ ಶೈಲಿ ಏಕತಾನತೆ ಇಂದ ಕೂಡಿದ್ದರೂ, ಕಥಾವಸ್ತು ಮಾತ್ರ ಅತ್ಯಾಕರ್ಷಕ ಹಾಗು ಅತ್ಯಂತ ನವ್ಯ.

ಕನ್ನಡ ಸಾಹಿತ್ಯಕ್ಕೇ ಹೊಸ ಆಯಾಮ ಕೊಟ್ಟಿರುವ ಇಂತಹ ಪುಸ್ತಕಗಳು ಮತ್ತಷ್ಟು ಬರಲಿ ಎಂಬುದೇ ನನ್ನ ಆಶಯ.
ಉಪಯುಕ್ತ ಮಾಹಿತಿ:
ಪುಸ್ತಕದ ಹೆಸರು: ಶಾಲಭಂಜಿಕೆ
ಪ್ರಕಟಣೆ: ಛಂದ ಪುಸ್ತಕ
ದರ: ೮೦ ರೂಗಳು
ಪ್ರತಿಗಳು: ಸಪ್ನಾ ಬುಕ್ ಹೌಸಲ್ಲಿ ಲಭ್ಯ

ಕಾಸ್ ಕೊಟ್ಟು ಕನ್ನಡ ಪುಸ್ತಕ ಓದಿ!!
" ನೀನ್ ತಗಂಡಿದ್ಯಲ್ಲ ನಿಂದೇ ಒಸಿ ಕೊಡಪ್ಪ ಓದ್ಕೊಡ್ತಿವಿ "  ಅಂತ ಕೆಲವರು ನನ್ನ ಕೇಳಬಹುದು.
" ಸಾರಿ ಸರ್, ನೀವು ಕ್ಯೂನಲ್ಲಿದ್ದೀರಿ, ದಯವಿಟ್ಟು ನಿರೀಕ್ಷಿಸಿ "

೨೦೧೧ರ ಕೊನೆಯ ಬರವಣಿಗೆ.  ೨೦೧೨ ರಲ್ಲಿ ಸಿಗೋಣ ಗೆಳೆಯರೇ. 

~ ಶಶಾಂಕ  

PLASTIC PROBLEMS

ಕಾಲೇಜಲ್ಲಿದ್ದಾಗ ಬರೆದಿಟ್ಟುಕೊಂಟಿದ್ದ ಒಂದು ಹಾಳೆ ಕೈಗೆ ಸಿಕ್ಕಿತು. ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ನ್ಲಿ ನಡೆದ 'ONE LINER" ಕಾಂಪಿಟೇಷನ್ಗಾಗಿ ನಾನು ಮತ್ತು ನನ್ನ ಗೆಳೆಯ ಹರ್ಷಲ್ ಕೆಲವು ONE LINER ಗಳನ್ನು ಸೃಷ್ಟಿಸಿದ್ವಿ. ಸ್ಪರ್ಧೆಯ ಥೀಮ್ "NO PASTICS" ಆಗಿತ್ತು. ಬರೆದ ಹತ್ತು ಹನ್ನೊಂದು ಒನ್ ಲೈನರ್ಗಳನ್ನು ಸಬ್ಮಿಟ್ ಮಾಡಿದ್ವಿ. ಅಲ್ಲಿ ಹೇಗೆ ಕೊಟ್ಟಿದ್ವೋ, ಹಾಗೆಯೆ ಇದನ್ನು ಈ ಕೆಳಗೆ ನಿಮ್ಮ ಮುಂದಿಟ್ಟೇದೇನೆ.

ಓದಿ, ಮನಸ್ಸಾದ್ರೆ (ತಾಕತ್ತಿದ್ದರೆ !!) ಪ್ಲ್ಯಾಸ್ಟಿಕ್ ಬಳಕೆ ಕಮ್ಮಿ ಮಾಡಿ !!
ಪ್ರಥಮ ಬಹುಮಾನ ಗೆದ್ದ ಈ ಸಂಗ್ರಹ ಈಗ ಸಾರ್ವಜನಿಕವಾಗುತ್ತಿದೆ. ಸ್ಪರ್ಧೆಯಲ್ಲಿ ಎಷ್ಟ್ ಜನ ಭಾಗವಹಿಸಿದ್ರು ಅಂತ ಮಾತ್ರ ಕೇಳ್ಬೇಡಿ !!
  • Who told death is in the hands of God, its just 50p in market.

  • Plastics play a major role in our life, ofcourse it does play with our life.

  • Today, ' life without plastic ' is a dream. If this prevails,     ' life ' would be a dream, tomorrow.

  • Mother earth is busy in research work for the enzyme 'plasticase'.

  • We can't bury it, we can't burn it, then? Just forget it  !!

  • Fifty percent of the world is PLASTIC FREE, but the other half is "FREE TO PLASTIC".

  • The most ironical phrase the world has ever seen is the one here - NO PLASTIC ZONE.

  • I strictly said 'NO' to plastics, but they just do not seem to listen.

  • Plastics act like as if they are the Genetic Materials of Destruction.

  • Remember the VTU laminated marks card which we used to get for each semester ?? I could not digest the marks, Mother Earth can not digest the card.

  • Cycling keeps us healthy, recylcing keeps us ALIVE --> The Prize winning one.

ಲೇಡೀಸ್ ಪ್ರಾಬ್ಲಮ್ಮು - ಅಣಕ ಹಾಡು


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಪ್ರತಿಯೊಬ್ಬ ಹೆಣ್ ಮಗ್ಳೀಗೂ ಇರ್ತಾನೊಬ್ ಗಂಡ್ಸು
ಅವ್ನ್ ಸಾಚ ಆಗಿರೋದು ನಿಮ್ ಲಕ್ ಡಿಪೆಂಡ್ಸು
ಎಲ್ಲೇ ಇದ್ರೂನು ನೀವ್, ಹೆಂಗೇ ಇದ್ರೂನು ನೀವ್
ಲೇಡೀಸ್ ಅಂದ್ರೆ ಜೊಲ್ ಸುರ್ಸೊ ಜೆಂಟಲ್ ಮೆನ್ಸು
ಹುಡ್ಗೀರ್ನ ಕಣ್ಣಲ್ಲೇ ಅಳೆಯೋ ರೀಟೇಲ್ ಮರ್ಚೆಂಟ್ಸು..

ಥೂ.. ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಯೂನಿಫಾರ್ಮ್ ಲಿ ಮುದ್ ಮುದ್ದಾಗಿ ಕಾಣ್ಸ್ತಿದ್ದೆ ನಾನು, ಸ್ಕೂಲ್ನಲ್ಲಿದ್ದಾಗ
ಲಾಸ್ಟ್ ಬೆಂಚಲ್ಲಿ ಕೂತ್ಕೊಂಡು ತುಂಬಾ ಸೌಂಡ್ ಮಾಡ್ತಾ ಇದ್ದ, ಅವ್ನ್ ಹೆಸರು ನಾಗ
ಯಾವ್ನೊ ಒಬ್ಬ ಕೆಮ್ದಂಗಾಯ್ತು, ಹಿಂದಕ್ಕ್ ತಿರುಗಿ ನೋಡೇಬಿಟ್ಟೆ
ನಾಗ ನನ್ನ ನೋಡ್ತಾ ಇದ್ದ, ಘುರಾಯ್ಸ್ತಾದ್ದ ಸಿಕ್ಕಾಬಟ್ಟೆ..

ವಯಸೀಗೆ ಬರುವ ಮುನ್ನವೇ, ಕಾಳು ಹಾಕ್ಸ್ಕೊಳೋ ಹಕ್ಕಿ ಆಗ್ಬಿಟ್ಟೆ
ಅಷ್ಟು ಬೇಗ ಎಷ್ಟೋ ಹುಡುಗರ ಭಗ್ನ ಪ್ರೇಮಕೆ ಕಾರಣವಾಗ್ಬಿಟ್ಟೆ..


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಸು |
ಊರಿಗ್ ಮುಂಚೆ ಬೆನ್ನಿಗಂಟೊ ಇಲ್ಲದ್ ಅಫೇರ್ಸು ||

 ~ ಒಂದು ಹೆಣ್ಣಿನಂತೆ ಯೋಚಿಸಿ ಬರೆದದ್ದು. ಜನಪ್ರಿಯವಾದರೆ ಮುಂದ್ವರೆಸ್ತೀನಿ. ಇಲ್ದಿದ್ರೆ ಬ್ಲಾಗು ಇಷ್ಟೇನೆ !!!