'ಸಾಲದ' ಮದುವೆ ಮುಂಜಿ ಪಂಕ್ಸನ್ ಗಳು !!
ಹುಡ್ಗೀರು, ಹೆಂಗಸರು, ಮದುವೆ ಇವುಗಳ ಮೇಲೆ ಆಕರ್ಷಣೆ ಇಲ್ಲವೆಂದರೆ ಒಬ್ಬ ಗಂಡಸನ್ನು ಮಂಗಳಮುಖಿ ಅನ್ನುತ್ತಾರೋ ವಿರಾಗಿ ಅಂತಾರೋ ತಿಳಿಯದು. ಅದು ನಮಗೆ ಬೇಡವಾದ ವಿಚಾರ. ಆದರೆ ಈ ಮದುವೆ, ಮುಂಜಿ, ನಾಮ್ಕರಣ, ಅರ್ವತ್ತೊರ್ಷದ ಶಾಂತಿ, ಬರ್ತಡೆ ಪಾರ್ಟಿ ಇವುಗಳ ಬಗ್ಗೆ ನಿಮಗೆ ವೈರಾಗ್ಯ ಬಂತೋ .. ನಿಮ್ಮನ್ನ ಅಂತರ್ಮುಖಿ ಅಂತ ಜನಗಳು ಬಯ್ತಾರೆ. ಅಂತರ್ಮುಖಿ ಎಂಬ ಪದ ಗೊತ್ತಿರದ ಜನ'ಗೊ'ಳು ನಿಮ್ಮನ್ನ ಹುಚ್ಚಾ ಬೆಪ್ಪ ಎಂದು ಕರೆಯುವುದುಂಟು. ಇನ್ನು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ಪ್ಯಾಲೇಸಿನ ಶೌಚಾಲಯದಲ್ ಹುಟ್ದಂಗಾಡೋರು 'ನಾಟ್ ಸೋ ಸೋಶಿಯಲ್', 'ಇಂಟ್ರಾವರ್ಟ್' ಎಂಬ ಪದಗುಚ್ಛ ಬಳಸುತ್ತಾರೆ.
ನಂಗೂ ಸಾಕಾಯ್ತಪ್ಪ.. ಈ ರೀತಿ ಸಮಾರಂಭಗಳಿಗೆ ಹೋಗೀ ಬಂದು. ಈ ವಯಸ್ಸೇ ಅಂಥದ್ದು. ಅಂದ್ರೆ ಈ 23-24 ರ ಹರೆಯ ಯಾವ್ ಮನುಶ್ಯಂಗೂ ಬೇಡಾಪ್ಪ. ಆಗ ತಾನೇ ಡಿಗ್ರಿ ಮುಗ್ದಿರತ್ತಾ? ನಮ್ ಕಣ್ ಮುಂದೇನೇ ನಾವು ಕಾಲೇಜಿನಲ್ಲಿ ನಮ್ಮ ಜತೆಯಲ್ಲೇ ನಕ್ಕೊಂಡು, 'ನಲ್'ಕೊಂಡು ಓದಿದ ಹುಡುಗಿಯರಿಗೆಲ್ಲಾ ಮದುವೆ.. ಬಿಡಿ ಅದು ಎಲ್ಲ ಹುಡುಗರ 'ಪರ್ಸನಲ್' ವಿಷಯ. ಅದಕ್ಕ್ಕೆ ನಾವ್ 'ಕೈ' ಹಾಕೋದು ಸರಿಯಲ್ಲ..
ಅಲ್ಲಾ.. ಈ ಜೀವ್ನ ಇರೋದೇ ಪಂಕ್ಸನ್ ಗಳ್ನ ಅಟೆಂಡ್ ಮಾಡೋದಕ್ಕಾ ಅಂತೊಮ್ಮೆ ನಿಮಗನಿಸಿದರೆ ನಾನು ನೀವು ಸಮಾನ ಮನಸ್ಕರು ಅಂತ. ಆಷಾಡ ಬಿಟ್ರೆ ಮಿಕ್ಕೆಲ್ಲಾ ಮಾಸದಲ್ಲೂ ಈ ಪಂಕ್ಸನ್ ಸಹವಾಸ ತಪ್ಪಿದಲ್ಲ. ನನ್ ಪ್ರಕಾರ ಇವಕ್ಕೆ ಅರ್ಥಾನೇ ಇಲ್ಲಾರೀ..
ಮದುವೆ ಅಂದ್ರೆ ಅಲ್ಲಿ ಬರಿ ಅಳು. ನಗುವಿನ ಮುಖವಾಡದಲ್ಲಿ... ಜಾಸ್ತಿ ಎಕ್ಸ್ಪ್ಲೇನ್ ಮಾಡಲ್ಲ. ಖ್ಯಾತ ನಿರ್ದೇಶಕ ಗುರುಪ್ರಸಾದ್ ಬಾಯಲ್ಲಿ ಮದುವೆ ಅಂದ್ರೆ ಏನ್ ಗೊತ್ತಾ - "ಇಬ್ರನ್ ಮಲಗ್ಸಕ್ಕೆ ಅದೆಷ್ಟ್ ಜನ ಅದೆಷ್ಟ ದಿನ ಎದ್ದಿರ್ಬೇಕಪ್ಪ !!"
ಇನ್ನು ಮುಂಜಿಲಿ ಎರಡು ವಿಧ. ಸೊಂಟದಿಂದ ಮೇಲೆ, ಮತ್ತೊಂದು ಸೊಂಟದ ಕೆಳಗೆ.. ಅವರವರ ಸಂಸ್ಕಾರಕ್ಕೆ ತಕ್ಕಂತೆ.
ಸೋ ಮುಂಜಿಗೆ ಆಡಂಬರ ಬೇಕಿಲ್ಲ. ಸಂಸ್ಕಾರ ಸಾಕು.
ಗೃಹಪ್ರವೇಶ ಅಂತೂ ಕೇಳಲೇ ಬೇಡಿ. ಅದೊಂದು ಹೊಟ್ಟೆ ಕಿಚ್ಚಿನ ಉತ್ತುಂಗದ ಹಂಗ.. ಆಹ್ವಾನಿತ ಜನರು ಸುಮ್ನೆ ಬಂದು ಊಟ ಮುಗಿಸಿ ಹೋಗುವ ಬದಲು ಏನೋ ತಾವೇ ಈ ಮನೇಲ್ ಬಂದು ವಾಸಿಸಬೇಕೆನೋ ಎಂಬಂತೆ ಮನೆಯ ಆಕಾರ ಪ್ರಕಾರದ ಬಗ್ಗೆ ಕಾಮೆಂಟ್ ಹೊಡೆಯದೆ ಇರುವುದಿಲ್ಲ. ಈ ಚಂದಕ್ಕೆ ಯಾಕ್ ಆಗ್ದೆರೋ ಜನಗಳ್ನ ಕರೀಬೇಕು?
ನಾಮಕರಣ, ಮೊದಲ ಹುಟ್ಟಿದಹಬ್ಬ, ವೈಕುಂಟ ಸಮಾರಾಧನೆ ಇವೆಲ್ಲ ಎಷ್ಟೇ ಗ್ರ್ಯಾಂಡ್ ಆಗಿ ಮಾಡ್ಕೊಂಡ್ರು ನಿಮಗೆ ಜ್ಞಾಪಕ ಇರಲ್ಲ.
ಇನ್ನು ಅರ್ವತ್ತೊರ್ಷದ ಶಾಂತಿ ಮಾಡ್ಕೊತೀರ..
ರಿಟೈರ್ಡ್ ಆದ ದುಡ್ಡು ಕೈಯಲ್ಲಿರತ್ತೆ. ಆದರೆ ಬರೋ ಜನರು ಯಾವ್ ಮೈಂಡ್ ಸೆಟ್ ನಲ್ಲಿ ಬರ್ತಾರೆ ಅಂತ ನೀವು ಊಹಿಸಕ್ಕು ಆಗಲ್ಲ
ರಿಟೈರ್ಡ್ ಆದ ದುಡ್ಡು ಕೈಯಲ್ಲಿರತ್ತೆ. ಆದರೆ ಬರೋ ಜನರು ಯಾವ್ ಮೈಂಡ್ ಸೆಟ್ ನಲ್ಲಿ ಬರ್ತಾರೆ ಅಂತ ನೀವು ಊಹಿಸಕ್ಕು ಆಗಲ್ಲ
- "ಅಯ್ಯೋ ಪಾಪ.. ಮೂರ್ತಿ ಮನೇಲಿ ಶಾಂತಿ ಕಣ್ರೀ ಇವತ್ತು.. ಪಾಪ ಅವರ ಮನೆ ಕೊನೆ ಫಂಕ್ಷನ್ನು.. ಹೋಗ್ಬರೋಣ ಬನ್ನಿ" .. ಇವೆಲ್ಲ ಬೇಕಾ??
ಇನ್ನು ಪಂಕ್ಸನ್ ಗಳಲ್ಲಿ ಹೇಸಿಗೆ ಹುಟ್ಸೋ ಒಂದು ವಿಷಯ ಅಂದ್ರೆ ಉಡುಗೊರೆ. ನೀವೇ ಯೋಚನೆ ಮಾಡಿ, ಇದುವರ್ಗೂ ಎಷ್ಟ್ ಕಡೆ ಎಷ್ಟ್ ಜನಕ್ಕೆ ನೀವ್ ಗಿಫ್ಟ್ ಕೊಟ್ರಲ್ಲ.. ಅದ್ರಲ್ಲಿ ಎಷ್ಟ್ ಜನಕ್ಕೆ ನೀವು ಮನಃ ಪೂರ್ವಕ ಕೊಟ್ಟಿದ್ದೀರಾ, ಎಷ್ಟ್ ಜನಕ್ಕೆ ಏನೋ ಕೊಡಬೇಕಲ್ಲ ಅಂತಾನೋ ಅಥ್ವಾ ಅವರು ನಿಮ್ಮನೆ ಪಂಕ್ಸನ್ ಬಂದಾಗ ಕೊಟ್ಟಿದ್ರೂ ಅಂತ ವಾಪಸ್ ಮಾಡಿದ್ದೀರಾ.. ಇಷ್ಟ ಸಾಕಲ್ವ ಈ ಉಡುಗೊರೆ ಅನ್ನೋ ಕಾನ್ಸೆಪ್ಟ್ ಮೇಲೆ ಹೇಸಿಗೆ ಹುಟ್ಸಕ್ಕೆ..
ಇನ್ನು ಬೀಗರೂಟ ಬಾಡೂಟಗಳು ಪ್ರತಿಷ್ಠೆಯ ಪ್ರಶ್ನೆ.. ಕಂಠಪೂರ್ತಿ ಕುಡಿತ, ಗಂಟಲು ಗಂಟ ತಿನ್ನಾಟ .. !!
ಸ್ವಂತ ಹುಟ್ಟಿದಹಬ್ಬ ಆಚರಿಸ್ಕೊಳ್ಳೋದು.. ಬಿಡಿ. ಸಮಯ ಹಾಳು..
ಇನ್ನೊಂದ್ ಇಂಟರೆಸ್ಟಿಂಗ್ ವಿಷಯ.. '' ಯಾರಾರ ನಮ್ಮ ದೇಶದಲ್ಲಿ ಸತ್ಯನಾರಾಯಣ ಪೂಜೆಯನ್ನ ನಿಜವಾದ ಶ್ರದ್ಧೆ ಭಕ್ತಿಯಿಂದ ಮಾಡೋದು ನೋಡಿದಿರಾ.. ಚಾನ್ಸೇ ಇಲ್ಲ. ಊರೌರ್ನೆಲ್ಲ ಕರ್ಕೊಂಡು ಒಂದು ದೊಡ್ಡ ಸಮಾರಮ್ಭವನ್ನೇ ಮಾಡ್ಬೇಕು.. ಪೂಜೆ ಮರಿಬೇಕು. ಬಂದವರೆಡೆಗೆ ಗಮನ ವಹಿಸಬೇಕು. ಅದು ನಮ್ ಜನ್ಗಳ ಸತ್ಯನಾರಾಯಣ ಪೂಜೆಯ ರಿಯಲ್ ಡೆಫಿನಿಶನ್.."
ಸಾಲ ಮಾಡಿಯಾದ್ರು ಪಂಕ್ಸನ್ ಗಳನ್ನ ಜನಗೊಳು ಮಾಡಕ್ಕೂ, ಆ ಸಾಲದಷ್ಟು ಪಂಕ್ಸನ್ ನಾವ್ ಅಟೆಂಡ್ ಮಾಡಕ್ಕು ಸರಿಯಾಗಿದೆ.. ಲಂಚ್ ಬಫೆ ಇದ್ರು , ಎನ್ ಬೇಕೋ ಅದನ್ನ ಮಾತ್ರ ಹಾಕಿಸಿಕೊಳ್ಳುವ ಸೌಕರ್ಯ ಇದ್ರೂ ಜನ ಊಟ ಚೆಲ್ತಾರೆ ಅಂದ್ರೆ.. ನಿಜವಾಗ್ಲೂ ಆ ಜನ ಚೆಲ್ಲೆದ್ದೋಗಿದಾರೆ ಅಂತರ್ಥ.
ಇದೆಲ್ಲ ನಿಂತೋದ್ರೆ ಜನ ಸೇರೋದಾದರೂ ಎಲ್ಲಿ. ಸತ್ಸಂಗ, ವಿಚಾರ ಸಂಕೀರ್ಣ, ಚಿಂತನೆ-ಸಂವಾದ ಕಾರ್ಯಕ್ರಮಗಳು ಹೆಚ್ಚಾಗಲಿ. ಆಗ ಅವಕ್ಕೂ ಅರ್ಥ ಬರತ್ತೆ.. ಸ್ವಲ್ಪ ದೊಡ್ ಮಾತ್ಗಳು ಬರ್ತಾಇದೆ. ಇಲ್ಲಿಗೆ ಸಾಕಪ್ಪ.. ಲೈಟಾಗಿ ಓವರ್ ಆಗಿದ್ರೆ ಒಸಿ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ :)
ಉಸ್ಸಪ್ಪಾ ಈ 'ಪಂಕ್ಸನ್' ಮುಗಿತು... ನಿಮ್ಮ ಕಮೆಂಟ್ ನಮಗೆ ಉಡುಗೊರೆ :)
~ಹೊಗೆ
ಚೆನ್ನಾಗಿದೆ ಶಶಂಕಣ್ಣ .......
ಪ್ರತ್ಯುತ್ತರಅಳಿಸಿ