ರೋಮಿಯೋ ಒಬ್ಬ ಮಾಮೂಲಿ ಪ್ರೇಮಿಯೋ..
ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂತ ಗಾದೆ ಇದ್ರೆ ಅದನ್ನೇ ಈ ಚಿತ್ರದ ನಾಯಕ (ಗಣೇಶ್) ಬಂಡವಾಳ ಮಾಡಿಕೊಂಡು ನಾಯಕಿಗೆ (ಭಾವನಾ) ತನ್ನ ಮನೆ ಡಾಲರ್ಸ್ ಕಾಲೋನಿ, ತನ್ನ ತಂದೆ ಕೊಲೀಗು ಅಂಬಾನಿ ಅಂತೆಲ್ಲ ಡೋಂಗಿ ಹೊಡೆದು ಪ್ರೀತಿ ಪಡೆದುಕೊಳ್ಳುತ್ತಾನೆ. ನಾಯಕಿಯ ತಂದೆ (ಅವಿನಾಶ್) ಮಗಳಿಗೆ ಬೇರೆ ವರನೊಂದಿಗೆ ಮದುವೆ
ಮಾಡಲು ತಯಾರಿ ನಡೆಸುವಾಗ ನಾಯಕ ನಾಯಕಿಯೊಂದಿಗೆ ಪರಾರಿಯಾಗಿ ತರಾತುರಿಯಲ್ಲಿ ಮದುವೆಯಾಗಿ ತನ್ನ ಮನೆಗೆ
ಕರೆತರುತ್ತಾನೆ.ಡಾಲರ್ಸ್ ಕಾಲೋನಿಯಲ್ಲಿ ತನ್ನ ಗಂಡನ ಮನೆಯಿದೆಯೆಂದು ತಿಳಿದಿದ್ದ ನಾಯಕಿಗೆ ತನ್ನ ಗಂಡ ಮಹಾನ್ ಡವ್
ರಾಜ ಎಂದು ತಿಳಿಯುತ್ತದೆ. ಆದರೆ ನಾಯಕ ಮಾತ್ರ ತನ್ನದು ಡವ್ ಅಲ್ಲ ಪ್ಯೂರ್ ಲವ್ ಅಂತೆಲ್ಲ ಡೈಲಾಗ್ ಹೊಡೆದ್ರೂ ನಾಯಕಿ ಡೈವೋರ್ಸ್ ಕೇಳುತ್ತಾಳೆ.
ನಿಜವಾಗಲೂ ನನ್ನ ಮೇಲೆ ಪ್ರೀತಿ ಇದ್ರೆ ಡೈವೋರ್ಸ್ ಕೊಡು ಅಂದಾಗ ತ್ಯಾಗಮಯಿ ನಾಯಕ ಡೈವೋರ್ಸ್ ಗೆ ಒಪ್ಪುತ್ತಾನೆ .
ನಂತರ ನಿರ್ದೇಶಕರು ಕಥೆಯಲ್ಲಿ ಕೆಲವು ಡವ್ ಗಳನ್ನು ಮಾಡಿ ನಾಯಕ ನಾಯಕಿಯನ್ನು ಒಂದಾಗಿಸುತ್ತಾರೆ..
ವೈದಿ ಕ್ಯಾಮೆರ ಕೈಚಳಕದಲ್ಲಿ ಟ್ರ್ಯಾಕ್ ಶಾಟ್ಸ್ ಉತ್ತಮವಾಗಿದೆ, ಸರವಣನ್ ಸಂಕಲನ ಕೆಲವು ಕಡೆ ಅಷ್ಟು ಹರಿತವಾಗಿಲ್ಲ . ಆದರೆ ಚಿತ್ರದುದ್ದಕ್ಕೂ ನಾಯಕ ತೊಡುವ ಕೂಲಿಂಗ್ ಗ್ಲಾಸ್ ನಲ್ಲಿ ಲೈಟ್ ಬಾಯ್ಸ್, ಅಲ್ಯುಮಿನಿಯಂ ರಿಫ್ಲೆಕ್ಟರ್ಸ್ ಸುಮಾರು ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ಸಣ್ಣ ತಾಂತ್ರಿಕ ದೋಷವನ್ನ ಸರಿಪಡಿಸದೇ ಇರುವುದು ವಿಪರ್ಯಾಸ .
ಗಣೇಶ್, ಭಾವನ ತಮ್ಮ ಕೆಲಸ ನಿಭಾಯಿಸಿದ್ದಾರೆ. ರಂಗಾಯಣ ರಘು ಇಂತಹದೇ ಪಾತ್ರ ಇನ್ನು ನೂರು ಚಿತ್ರದಲ್ಲಿ ಮಾಡಿದರೂ ಜನ ಬೇಜಾರ್ ಮಾಡ್ಕೊಳ್ದೇ ನೋಡ್ತಾರೆ ಅನ್ನೋದೇ ರಘು ಶಕ್ತಿ. ಸಾಧು ಕೋಕಿಲ ಸೆಕೆಂಡ್ ಹೀರೋವಾಗಿ ಕಾಣಿಸಿಕೊಂಡು ಹೆಚ್ಚಿನ ದೃಶ್ಯಗಳಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ ಕಚಗುಳಿ ಇಡುತ್ತಾರೆ.
ನಿರ್ದೇಶಕ ಪಿ.ಸಿ.ಶೇಖರ್ ದೃಶ್ಯ ವೈಭವ ತೋರಿಸಲು ಹೋಗಿದ್ದಾರೆ ಹೊರತು ಕಥೆ ಹೇಳಲಿಕ್ಕಲ್ಲ. ನೀರಸ ಹಾಗು ಮಾಮೂಲಿ ಕಥೆಗೆ ಕೆಲವು ಉತ್ತಮ ಹಾಡುಗಳನ್ನು ಕೊಟ್ಟಿರುವುದು ಅರ್ಜುನ್ ಜನ್ಯರ ಪ್ರತಿಭೆ ತೋರಿಸುತ್ತದೆ. ಆದರೆ 'ಆಲೋಚನೆ ಆರಾಧನೆ' ಹಾಡಿಗೂ ಅದರ ಹಿಂದಿನ ದೃಶ್ಯಕ್ಕೂ ಸಂಭಂಧವಿಲ್ಲ. ಹಾಗು ಎಲ್ಲರ ಬಾಯಲ್ಲೂ ಗುನುಗುವ ರೋಮಿಯೋ ಶೀರ್ಷಿಕೆ ಹಾಡು ಚಿತ್ರ ಮುಗಿದ ನಂತರ ಬರುವುದು ಶೋಚನೀಯ.
ಬಹುಶಃ ನಟರಾಜ್ ರವರ ಸಂಭಾಷಣೆ ಇರದಿದ್ದರೆ ಇಡೀ ಚಿತ್ರ ಮಂಕಾಗಿ ಬಿಡ್ತಿತ್ತೋ ಏನೋ.
ಆದರೂ ಗಣೇಶ್ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಭಾವನಾ ಸ್ಕ್ರೀನ್ ಪ್ರೆಸೆನ್ಸ್, ಸಾಧು,ರಘು ಹಾಸ್ಯದ ಟೈಮಿಂಗ್ ಪಕ್ಕ ಪೈಸಾ ವಸೂಲ್.
~ಹೊಗೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ