A LIFE TIME OPPORTUNITY |
ನಿಮಗೆ ಗೊತ್ತಿರಲಿಕ್ಕಿಲ್ಲ ಅಂದರೆ ಇಲ್ಲಿ ಕೇಳಿ.. ಪುಸ್ತಕ ಕೊಳ್ಳುವಾಗ ಬಹಳ ಏಕಾಗ್ರತೆ ಬೇಕು. ಆ ಏಕಾಗ್ರತೆಯನ್ನೇ ಕೆಡಿಸುವಂಥ ಕರೆ ಅದಾಗಿತ್ತು.
ಅದು ಕನ್ನಡ ಕೋಟ್ಯಾಧಿಪತಿ ತಂಡದಿಂದ ಬಂದಿತ್ತು. ಅಲ್ಲಿಂದ ಶುರುವಾಯಿತು ನೋಡಿ ಕನಸುಗಳ ಸೌಧ. ಆ ಭಾವ ಮನುಷ್ಯ ಸಹಜವಾಗಿ ಬಂದದ್ದು. ಕರೆ ಅತಿಮಾನುಷ ಶಕ್ತಿಯಿಂದ ಆದದ್ದು. ನಂತರ ಕೆಲವು ಸುತ್ತುಗಳ ಆಯ್ಕೆ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ತಿಂಗಳುಗಳೇ ಕಳೆದಿತ್ತು. ಆ ಕನಸಿನ ಸೌಧವೂ ಬೆಳೆದಿತ್ತು.
ಚೆನ್ನೈಗೆ ಅಪ್ಪನೊಂದಿಗೆ ಪ್ರಯಾಣ. ಆ ರೈಲಿನ ಪ್ರಯಾಣದಲ್ಲಿ ಮೂಡಿಬಂದ ಭಾವಗಳು ನನ್ನ ಬ್ಲಾಗಿನ 'ಭಯಗವನ'ದಲ್ಲಿ ಓದಿ. ಸುವರ್ಣ ವಾಹಿನಿಯ ಆತಿಥ್ಯ ಅಚ್ಚುಕಟ್ಟಾಗಿತ್ತು. ಮೊದಲ ಬಾರಿಗೆ ಪುನೀತ್ ರನ್ನು ನೋಡಿದಾಗ ಎಕ್ಸೈಟ್ ಆಗಿದ್ದೆ.
ನನ್ನೊಂದಿಗೆ ಬಂದಿದ್ದ ಮಿಕ್ಕ ಒಂಭತ್ತು ಜನ ಸ್ಪರ್ಧಿಗಳಲ್ಲಿ ಸ್ನೇಹವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಎಲ್ಲರೂ ಗೆಲ್ಲಲಿ ಎಂಬ ಮನೋಭಾವ ಯಾರಿಗಾದರು ಬಂದುಬಿಡತ್ತೆ ಅಲ್ಲಿ.
ಹೈಲೈಟ್ಸ್..
- ಸ್ವತಃ ಪುನೀತ್ ಕರೆದು ಅವರ ಈಮೇಲ್ ಐಡಿ ಕೊಟ್ಟಾಗ ಆದ ಸಂತಸ, ರಾಘಣ್ಣ ನಂದೇ ಬೆಸ್ಟ್ ಎಪಿಸೋಡ್ ಅಂದಾಗ, ಗುರುಪ್ರಸಾದ್ ಕರೆದು ಬೆನ್ನು ತಟ್ಟಿದಾಗ ಆದ ಸಾರ್ಥಕ ಭಾವ ಇವೆಲ್ಲ ನೆನಪುಗಳು.
- ಫಾಸ್ಟೆಸ್ಟ್ ಫಿನ್ಗರ್ಸ್ ಸುತ್ತಿಗೆ ಆಯ್ಕೆಯಾಗುವ ಮುನ್ನ ಒಮ್ಮೆ ದೇವರನ್ನ ಬೇಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಒಂದು ಕ್ಷಣಕ್ಕೆ ಈ ಯೋಚನೆ ಬಂತು - "ಈ ಹತ್ತು ಜನಗಳಲ್ಲಿ ನನ್ನನ್ನೇ ಯಾಕೆ ಆ ದೇವರು ಆಯ್ಕೆ ಮಾಡಬೇಕು? ನಾನೇನು ಸ್ಪೆಷಲ್ ಕಿಡ್ದೆ.. ಹ್ಜ್ಞಾಂ ..? ". ಈ ಯೋಚನೆ ಬಂದ ಮೇಲೆ ಸುಮ್ಮನೆ ಕೂತು ಆಟದ ಬಗ್ಗೆ ಗಮನ ಹರಿಸಿದೆ.
- ಶೋ ಬಿತ್ತರವಾದ ದಿನದಿಂದ ನಾನು ಎಲ್ಲಿ ಹೋದರೂ ಜನ ಗುರುತಿಸುತ್ತಾರೆ.
- ಆಟೋದವರು ನನ್ನ ನೋಡಿ ಜೈ ಮಾಕಾಳಮ್ಮ ಅಂದಾಗ ನನ್ನ ತುಟಿ ಅಂಚಿನಲ್ಲಿ ನಗೆ.
- ಚಿತ್ರಮಂದಿರ, ಹೋಟೆಲ್, ಮಾಲ್ ಗಳಲ್ಲಿ ಜನ ನನ್ನ ಹತ್ತಿರ ಬಂದು ಅಭಿಮಾನ ತೋರಿಸಿದಾಗ ಖುಷಿ ಆಗತ್ತೆ.
- ಈ ಸಂತಸ, ಖುಷಿ, ಸಂಭ್ರಮ.. ಈ ಜಿಗಿ ಈ ಜಿಗಿ .. ಎಲ್ಲವು ಎರಡು ದಿನ..
ಅಲ್ಲಿ ನಡೆದಿದ್ದನ್ನ ಪದಗಳಲ್ಲಿ ಹೇಳುವ ಬದಲು ಈ ಕೆಳಗಿನ ವಿಡಿಯೋಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
CHECK THIS VIDEO LINKS FOR MY FULL EPISODE VIDEOS..
THANK YOU !!
ನಿಜವಾಗಲು ಇಲ್ಲಿಯವರೆಗೂ ಅತಿ ಹೆಚ್ಚು ಇಷ್ಟ ಪಟ್ಟ ಎಪಿಸೋಡ್ ಅಂದ್ರೆ ನಿಂದೆ ಮಗ,ಬಾಳ ಎಂಜಾಯ್ ಮಾಡದೇ.
ಪ್ರತ್ಯುತ್ತರಅಳಿಸಿ